Monday, August 11, 2008

ಭ್ರಮಾಲೋಕದಲ್ಲೊಂದು ನಿಜ ಸ್ಪಟಿಕ

ಭ್ರಮಾಲೋಕದ ಕಲ್ಪನೆಯ ಸುತ್ತ
ನಾ ಕಂಡಿದ್ದೆ,ಎಣಿಸಿದ್ದೆ ಜೀವನದ ಗತ್ತ
ಹುಚ್ಚು ಪ್ರೀತಿಯ ಹೊಳೆಯಲಿ ಕಳೆದುಹೋಗಿದ್ದೆ
ಜಗವೇನೆಂದು ಅರಿಯದೇ
ಬದಲಿಸದೇ ಮಗ್ಗಲ ಹಾಗೇ

ವ್ಯಕ್ತಿಯ ಆಳ-ಅಗಲ ಒಳಮನಸು
ಮೀನಿನ ಹೆಜ್ಜೆಗುರುತ,ಹೆಣ್ಣಿನ ಮನಸ
ತಿಳಿಯಲಾಗಲಿಲ್ಲ
ನಾನೇನೆಂಬುದನ ಅರಿಯಲೇ ಇಲ್ಲ
ಕಳೆದುಹೋಗಿದ್ದೇ ಎಲ್ಲೋ

ಸ್ಪಟಿಕ ಸಿಕ್ಕರೂ ಅದನರಿಯದೇ
ತುಕ್ಕಿಡಿದ ಕಬ್ಬಿಣಕೆ
ಕಾತರಿಸುತಿತ್ತು ಮನಸು, ಕನವರಿಸತಿತ್ತು ಕೊಡ
ಎಗ್ಗಿಲ್ಲದೇ,ಮಗ್ಗಿಲ್ಲದೇ
ಬೆಂದುಹೋಗಿತ್ತು ಮನಸು

ನಾ ಬಯಸದೇ, ನನ್ನ ಕಲ್ಪನಾಮೂರ್ತಿ
ತಾನಗಿ ಒಲಿದು ಬಂದಿತ್ತು
ಅದನರಿಯದೇ ಹೋಗಿತ್ತು ಮನಸು
ತಿಳಿಗೇಡಿಯಂತೆ ಶತಪಥ ಅಡ್ಡಾಡುತಿತ್ತು
ನಿಂತಲ್ಲಿ ನಿಲ್ಲದೇ, ಕುಂತಲ್ಲಿ ಕೂರದೇ

ಇಂದೆನಗನಿಸಿದೇ,ಸ್ಪಟಿಕ ದೂರಸರಿಯುವ ಮುನ್ನ
ಅದರರ್ಥ ತಿಳಿದು ಕೊನೆಗೂ
ಕಬ್ಬಿಣವ ಬಿಟ್ಟು, ಸ್ಪಟಿಕಕೊಲಿದೆನೆಂದು
ಆ ಸ್ಪಟಿಕ ನನ್ನದು ಚಿರಕಾಲ
ಅದೆಲ್ಲಿದ್ದರೂ ಹೇಗಿದ್ದರೂ ನನ್ನದೇ

No comments: