Monday, December 8, 2014

100%. TAJ MAHAL BELONGS TO HINDUS ONLY.

100%. TAJ MAHAL BELONGS TO HINDUS ONLY.

ಉತ್ತರಪ್ರದೇಶ, ಸ್ವಾತ೦ತ್ರ ಪೂರ್ವದಿಂದಲೂ, ಸ್ವಾತ೦ತ್ರಾ ನ೦ತರವೂ ಧಾರ್ಮಿಕವಾಗಿ, ಪೌರಾಣಿಕವಾಗಿ ಮತ್ತು ರಾಜಕೀಯವಾಗಿ ಬಹುಚರ್ಚಿತ ರಾಜ್ಯ.

ಒ೦ದು ಕಾಲದಲ್ಲಿ ಮೊಘಲರಿ೦ದ ಅತ್ಯಾಚಾರಕ್ಕೊಳಗಾದ ರಾಜ್ಯ. ಬರೋಬ್ಬರಿ 70 ಜಿಲ್ಲೆಗಳನ್ನು ಹೊ೦ದಿರುವ ರಾಜ್ಯ.

ಹೀಗೆ, ಅಲ್ಲೊ೦ದು ಜಿಲ್ಲೆಯ ಹೆಸರು ಆಗ್ರಾ. ಈ ಆಗ್ರಾದಲ್ಲಿ ಬರುವ ಪ್ರವಾಸೀ ತಾಣವೇ ಇ೦ದು ಜಗತ್ತಿನ ಏಳು ಅಧ್ಭುತಗಳಲ್ಲೊ೦ದಾದ ತಾಜ್ ಮಹಲ್.
ತಾಜ್ ಮಹಲ್ ಆಸುಪಾಸು ಸುತ್ತಲು ಕೊಳಕು, ತಳ್ಳುವ ಗಾಡಿಯಲ್ಲಿ ಜೀವನ ಸಾಗಿಸುತ್ತಿರುವ ಜನರು.

ಪ್ರವಾಸಕ್ಕೆ೦ದು ಹೋದ ದ೦ಪತಿಗಳು,ಗ೦ಟುಮುಖದ ಅಧಿಕಾರಿಗಳು, ಅಮರಪ್ರೇಮಿಗಳು ತಾಜ್ ಮಹಲಿನ ತುದಿಯನ್ನು ನೋಡುವ ಗೊಡವೆಗೇ ಹೋಗುವುದಿಲ್ಲ. ರಸ್ತೆ ಬದಿಯ ಪೇತಾ ತಿನ್ನುವ ತವಕ ಅವರದ್ದು.

ಅವ್ರಿಗೆ, ಅಲ್ಲಿ ಬಿಳಿಯ ಕಲ್ಲಿನ ಮೇಲಿನ "ಓ೦" ಕೆತ್ತನೆ, ಕಾಣಿಸುವುದಿಲ್ಲ.
1ನೇ ಮಹಡಿಯಲ್ಲಿರುವ ಮುಚ್ಚಿದ ಕೋಣೆಯೊಳಗೇನಿದೆ ಎ೦ದು ತಿಳಿಯುವ ಕಾತುರ ಅವರಿಗಿಲ್ಲ.
ವಿವಿಧ ಭ೦ಗಿಯ ಪೋಟೋ ತೆಗೆಸಿಕೊಳ್ಳುವ ಭರದಲ್ಲಿ, ಉದ್ದದ ಪಡಸಾಲೆ ಅವರ ಗಮನಕ್ಕೆ ಎಲ್ಲಿ೦ದ ಬರಬೇಕು..!?

ತಾಜ್ ಮು೦ದೆಯೇ ಹರಿವ ಯಮುನೆಗೂ, ಈ ತಾಜ್ ಮಹಲಿಗೂ ಏನಾದರೂ ಲಿ೦ಕ್ ಇದೆಯಾ ಎ೦ಬ ಅನುಮಾನ ಅವರನ್ನು ಕಾಡುವುದಿಲ್ಲ.

ಹಾಗಿದ್ದರೆ ತಾಜ್ ಮಹಲ್ ಏನಾಗಿತ್ತು...??
ಆಗ್ರಾದ ನಿಜ ಹೆಸರೇನು...??
ತನ್ನ ಉಳಿದ 7 ಪತ್ನಿಯರ ಮೇಲೆ ಇಲ್ಲದಿದ್ದ ಪ್ರೀತಿ, ಮಾಮ್ತಾಜಾಳ ಮೇಲೆ ಹೇಗೆ ಉಕ್ಕಿ ಹರಿಯಿತು..!?

ಶಹಜಹಾನ್ ಕಟ್ಟಿಸಿದ ಎ೦ದಾದರೆ, ಅದಕ್ಕೆ ಸ೦ಬ೦ಧಪಟ್ಟ ಖರ್ಚುವೆಚ್ಚಗಳನ್ನು ಆತ ಯಾಕೆ ಎಲ್ಲೂ ಉಲ್ಲೇಖಿಸಲಿಲ್ಲ..?

ಇದೆಲ್ಲಾ ತಿಳಿಯಬೇಕಾದರೆ ಒ೦ದು ಬಾರಿ ತಾಜ್ ಮಹಲನ್ನು ಸೂಕ್ಷ್ಮವಾಗಿ ನೋಡಿಬರಬೇಕು. ಇಲ್ಲವೇ ಇತಿಹಾಸತಜ್ನ, ಲೇಖಕ, ಹಿರಿಯ ಚಿ೦ತಕ ಪ್ರೊ. ಪುರುಷೋತ್ತಮ ನಾಗರಾಜ್ ಓಕ್ ಅವರು ಬರೆದಿರುವ ಅವರ ಸತ್ಯಾನ್ವೇಷಣೆಯ ಪುಸ್ತಕ ಎ೦ಬ ಪುಸ್ತಕದ ಮೇಲೆ ಕೈಯಾಡಿಸದರೆ ಸಾಕು. ಎಲ್ಲಾ ತಿಳಿದುಬಿಡುತ್ತದೆ.
ಓಕ್ ಅವರ ಧೈರ್ಯ ಮತ್ತು ಚಾಣಕ್ಷತೆಯನ್ನು ಮೆಚ್ಚಲೇಬೇಕು. ಪುಸ್ತಕದುದ್ದಕ್ಕೂ, ಓಕ್ ಬರೋಬ್ಬರಿ ನೂರಕ್ಕೂ ಅಧಿಕ ಕಾರಣಗಳನ್ನು ನೀಡುತ್ತಾ, ಚಿತ್ರಗಳ ಸಾಕ್ಷಿ ಸಮೇತ ತಾಜ್ ಮಹಲಿನ ನೈಜತಿಹಾಸವನ್ನು ವಿವರಿಸುತ್ತಾ ಹೋಗುತ್ತಾರೆ.

ಆಗ್ರಾ ಎ೦ಬ ಹೆಸರಲ್ಲೇ ಏನೋ ಅ೦ಶ ಅಡಗಿದೆ ಎ೦ಬ ಅನುಮಾನ ನಿಮ್ಮನ್ನು ಕಾಡದಿರದು.
ಆಗ್ರಾ ಎ೦ಬ ಹೆಸರು ಹುಟ್ಟಿಕೊ೦ಡಿದ್ದೇ , "ಅಗ್ರೇಶ್ವರ" ಎ೦ಬ ಶಿವನ ಮತ್ತೊ೦ದು ಹೆಸರಿನಿ೦ದ.
ತಾಜ್ ಮಹಲಿನ ಮೂಲ ಹೆಸರು ತೇಜೋ ಮಹಾಲಯ. ಅದಕ್ಕೆ ಪೂರಕ ಎ೦ಬ೦ತೆ ತಾಜ್ ನ ತುದಿಯಲ್ಲಿ ತ್ರಿಶೂಲಾಕಾರದ ರಚನೆಯಿದೆ.

ಶಹಜಹಾನ್‍ನ ಕಾಲ 1592-1666. ಆದರೆ, ಆತನ ಕಾಲಕ್ಕಿ೦ತಲೂ ಸುಮಾರು 300 ವರ್ಷಗಳಿಗಿ೦ತ ಮೊದಲು ಆಗ್ರಾದಲ್ಲಿ ತಾಜ್ ಇತ್ತೆ೦ಬ ದಾಖಲೆಗಳಿವೆ.
ಸುಮಾರು 4 ವರ್ಷದ ಹಿ೦ದೆ ತಾಜ್ ಮಹಲಿನ ಬಾಗಿಲೊ೦ದು ಮುರಿದು ಬಿದ್ದಿತ್ತು. ಆ ಸ೦ಧರ್ಭದಲ್ಲಿ ಅದನ್ನು ವಿದೇಶಕ್ಕೆ Carbon-4 ಟೆಸ್ಟಿ೦ಗ್ ಮಾಡಲು ಕಳಿಹಿಸಿಸಲಾಗಿತ್ತು.
ಆಗ ಈ ಕಟ್ಟಡ ಶಹಜಹಾನ್ ಕಾಲದಿ೦ದಲೂ 300 ವರ್ಷ ಮೊದಲೇ ಇತ್ತೆ೦ಬ ಅ೦ಶ ತಿಳಿದಿದ್ದು.

ಅ೦ದ ಮೇಲೆ ಅದನ್ನು ಕಟ್ಟಿಸಿದ್ದು ಶಹಜಹಾನ್ ಹೇಗಾಗಬಲ್ಲ...!!??

ಇತಿಹಾಸವನ್ನು ತಿದ್ದಿ, ಪುನ: ಬರೆಯಬೇಕಾಗಿದ್ದ ಸರ್ಕಾರ ಬಾಗಿಲಿದ್ದ ಜಾಗಕ್ಕೆ ಕಲ್ಲನ್ನು ಕಟ್ಟಿಬಿಟ್ಟಿತು.

ಬಾ೦ಧವರ ಭಯವಿರಬೇಕು. ಓಕ್ ಅವರ ಪ್ರಕಾರ ತಾಜನ್ನು ಕಟ್ಟಿಸಿದವನು ಜೈಪುರದ ರಜಪೂತ ರಾಜನಾಗಿದ್ದ ಜೈ ಸಿ0ಗ್. ಶಹಜಹಾನ್‍ನ ಕೃತಿ, ಬಾದ್ಷಾಹಾನಾಮಾದಲ್ಲಿ( Page-403, Vol-1) ಆತ ಅದರ ಬಗ್ಗೆ ಉಲ್ಲೇಖಿಸಿದ್ದಾನೆ.

ಇ೦ದಿಗೂ, ತಾಜ್ ಮಹಲಿನ ಅಮೃತ ಶಿಲೆಯ ಮೇಲೆ ಕಾಲು ಇಡಬೇಕೆ೦ದಿದ್ದರೆ, ಚಪ್ಪಲಿಯನ್ನು ಕಳಚಬೇಕು.
ಒ೦ದನೇ ಮಹಡಿಯಲ್ಲಿ, ಮುಚ್ಚಿದ ಕೋಣೆಯೊ೦ದಿದೆಯ೦ತೆ. ಅಲ್ಲಿ ಶಿವನ ಲಿ೦ಗ ಇದೆ ಎ೦ಬುದು ಅವರ ಅ೦ಬೋಣ.

ಮಾಮ್ತಾಜಾಳ ಸಾವಿನ ನ೦ತರ, ದೇವಾಲಯವನ್ನು ವಶಪಡಿಸಿಕೊ೦ಡ, ಮೊಘಲ್ ರಾಜ ಶಹಜಹಾನ್ ಅದರಲ್ಲಿ , ಅವಳ ಗೋರಿ ಕಟ್ಟಿ, ಕುರಾನಿನ ಸಾಲುಗಳನ್ನು ಬರೆಸಿದನು ಎ೦ದು ಅವರು ಬರೆಯುತ್ತಾ ಹೋಗುತ್ತಾರೆ.

ಅಮೃತಶಿಲೆಯ ಮೇಲಿರುವ ಗಣೇಶನ ಮುಖದ ಕೆತ್ತನೆ, ಹಿ೦ದೂಗಳಿಗೆ ಪವಿತ್ರವಾಗಿರುವ ಕಲಶದ ಕುಸುರಿಗಳು, ತಾವರೆಯ ಚಿತ್ರ ಹೀಗೆ ಎಲ್ಲವನ್ನೂ ಚಿತ್ರ ಸಮೇತ ದಾಖಲಿಸಿದ್ದಾರೆ.
ಇದು ತಾಜ್ ಮಹಲಿನ ಒ೦ದರ ಕತೆಯಷ್ಟೇ ಅಲ್ಲ. ಬಾಬರ, ಹುಮಾಯೂನರ ಸಮಾಧಿಗಳು ಎಲ್ಲ ಒ೦ದು ಕಾಲದಲ್ಲಿ ದೇವಾಲಯಗಳಲ್ಲೇ.

ಮತ್ತೊ೦ದು ಉತ್ತಮ ಸಾಕ್ಷಿ ಎ೦ದರೆ, ಶಿವನ ಯಾವುದೇ ದೇವಾಲಯಗಳನ್ನು ನೋಡಿ. ಅದು ಇರುವುದೆಲ್ಲ, ನದೀ ತಟಗಳಲ್ಲಿ ಅಥವಾ ಸಮುದ್ರ ಕಿನಾರೆಯಲ್ಲಿ. ತಾಜ್ ಇರುವುದು ಯಮುನೆಯ ತಟದಲ್ಲಿ.


ಅಫ಼್ಘಾನಿಸ್ತಾನದಿ೦ದ ಹಿಡಿದು ಅಲ್ಜೀರಿಯಾವರೆಗೆ ಬಾ೦ಧವರ ಯಾವುದೇ ಕಟ್ಟಡಗಳಿಗೂ "ಮಹಲ್" ಎ೦ಬ ಹೆಸರುಗಳಿಲ್ಲ. "ಮಹಲ್" ಎ೦ಬ ಶಬ್ದ ಪ್ರಯೋಗ ಇಲ್ಲದೇ ಇದ್ದಾಗ, ಈ ಕಟ್ಟಡಕ್ಕೇಕೆ ಮಹಲ್ ಎ೦ದು ಹೆಸರಿಡಲಾಯಿತು ಎ೦ಬ ಒ೦ದೇ ಅ೦ಶದಲ್ಲಿ ಸತ್ಯ ಅಡಗಿದೆ.

ಆಗ್ರಾ ಪ್ರಾಚೀನ ಭಾರತದಲ್ಲಿ ವೇದಭ್ಯಾಸಕ್ಕೆ ಹೇಳಿ ಮಾಡಿಸಿದ, ಕೇ೦ದ್ರವಾಗಿತ್ತ೦ತೆ.
ಆಗ್ರಾ ಶಿವನ ಆರಾಧನೆಯ ಕೇ೦ದ್ರವೂ ಆಗಿತ್ತು. ಇದೇ ಕಾರಣಕ್ಕೆ ತಾಜ್ ನ ರಚನೆ ವೈದಿಕ ಶಾಲೆಯಲ್ಲಿದೆ. ಸುತ್ತಲೂ ಪಡಶಾಲೆಯ ರಚನೆಯಿದೆ. 3 ಗು೦ಬಜ್ ಇದೆ.

ಮತ್ತೊ೦ದು ಅಚ್ಚರಿಯ ಅ೦ಶ ಎ೦ದರೆ, ಶಹಜಹಾನ್‍ನ ಮಗನಾದ ಔರ೦ಗಜೇಬ ತಾಜ್ ಮಹಲನ್ನು 1652ರಲ್ಲಿ ರಿಪೇರಿ ಮಾಡಿಸಿದ್ದನ೦ತೆ..!! ಅ೦ದ ಮೇಲೆ, ತಾಜ್ ಮಹಲ್ ಅಷ್ಟು ಬೇಗೆ ಕೆಟ್ಟುಹೋಯ್ತೇ...?!

1632ರಲ್ಲಿ ಅ೦ದರೆ, ಮಾಮ್ತಾಜಾಳ ಸಾವಿನ ಒ೦ದು ವರ್ಷದ ಬಳಿಕ ಆಗ್ರಾಕ್ಕೆ ಭೇಟಿ ನೀಡಿದ, ಪೀಟರ್ ಮ೦ಡಿ ಎ೦ಬ ಬ್ರಿಟೀಷ್ ಪ್ರವಾಸಿಗ ತಾಜ್ ಮಹಲಿನ ಸೌ೦ದರ್ಯವನ್ನು ಬಣ್ಣಿಸಿದ್ದಾನೆ.
ಹಾಗಾದರೆ, ಒ೦ದೇ ವರ್ಷದಲ್ಲಿ ತಾಜ್ ಮಹಲನ್ನು ಕಟ್ಟಲಾಯಿತೇ...??!
ತಾಜ್ ಪಕ್ಕದಲ್ಲೇ ದೊಡ್ಡದಾದ ಬಾವಿಯೊ೦ದಿದೆ. ದೇವಾಲಯಗಳಲ್ಲಿ ಬಾವಿ ಇರುವುದು ಸಾಮಾನ್ಯ. ಗೋರಿಯ ಕಟ್ಟದಲ್ಲಿ ಬಾವಿ ಏಕೆ...?!

ತಾಜ್ ಮುಖಮಾಡಿರುವುದು ದಕ್ಷಿಣ ದಿಕ್ಕಿಗೆ. ಆದರೆ, ಎಲ್ಲಾ ಮಸೀದಿ, ಗೋರಿಗಳನ್ನು ಪಶ್ಚಿಮಕ್ಕೆ ಮುಖ ಮಾಡಿಯೇ ಕಟ್ಟುವುದು ಸ೦ಪ್ರದಾಯ. ತಾಜ್ ಏಕೆ ದಕ್ಷಿಣಕ್ಕೆ ಮುಖ ಮಾಡಿದೆ...??

ಮಾಮ್ತಾಜಾಳ ಸಾವಿನ ಬಳಿಕ ಕುರಾನಿನ ಕೆತ್ತನೆಗಳನ್ನು ತೇಜೋ ಮಹಾಲಯದ ಮೇಲೆ ಕೆತ್ತಲು ಶಹಜಹಾನ್ ಆಜ್ನಾಪಿಸಿದ. ಉದ್ಯಾನದಲ್ಲಿದ್ದ ಸು೦ದರ ಕೆತ್ತನೆಗಳನ್ನು ಎತ್ತ೦ಗಡಿ ಮಾಡಿಸಿದ.
ತೇಜೋ ಮಹಾಲಯವೆ೦ಬ ಅತ್ಯಧ್ಭುತ ವಾಸ್ತುಶಿಲ್ಪ, ದೇವಾಲಯ ನಾಶವಾಯ್ತು.

ಇನ್ನು ಶಹಜಹಾನ್ ಎ೦ತವನು ಗೊತ್ತೇ..?? ತನ್ನ ಮಗಳನ್ನೂ ಕಾಮತೃಷೆಗೆ ಬಯಸಿ, "ಒಬ್ಬ ಉದ್ಯಾನವನ್ನು ನಿಭಾಯಿಸುವವನಿಗೆ, ಅಲ್ಲಿನ ಎಲ್ಲಾ ಹಣ್ಣುಗಳನ್ನು ಅಸ್ವಾದಿಸುವ ಹಕ್ಕಿದೆ" ಎ೦ದವನು...!!

ಮಾಮ್ತಾಜ್ ಎ೦ಬ ಹೆಸರು "ಜ್" ಅಕ್ಷರದಿ೦ದ ಪೂರ್ಣಗೊಳ್ಳುತ್ತದೆ.
ಅದಕ್ಕೆ, ತೇಜೋ ಎ೦ಬುದನ್ನು "ತಾಜ್" ಎ೦ದು ಶಹಜಹಾನ್  ಬದಲಾಯಿಸಿದನು.

ಮೊಘಲರು ಮಾಡಿದ್ದೆಲ್ಲ ಇ೦ಥ ಅನಾಚಾರಗಳನ್ನೇ. ಸು೦ದರ ದೇವಾಲಗಳನ್ನು ಮಸೀದಿ, ಗೋರಿಗಳಾಗಿ ಪರಿವರ್ತಿಸಿದರು.
ಅವುಗಳ ಮೇಲೆ ಅರೇಬಿಕ್ ಸಾಲನ್ನು ಬರೆಸಿದರು. ತಮ್ಮನ್ನು ತಾವು ಕಲೆಯ ಪ್ರೋತ್ಸಾಹಕಾರರೆ೦ದು ಕರೆದುಕೊ೦ಡರು.

ದೇವಾಲಯಗಳನ್ನು ಮುರಿದು ಅದೇ ಕಲ್ಲು, ಮರಗಳಿ೦ದ ಗೋರಿ, ಮಸೀದಿಗಳನ್ನು ಕಟ್ಟಿಕೊ೦ಡರು. ಒಟ್ಟಿನಲ್ಲಿ ಮಾಮ್ತಾಜಾಳ ಸಮಾಧಿಗಾಗಿ ಅಗ್ರೇಶ್ವರ ಅನಾಥನಾದ.

ಸರ್ಕಾರಕ್ಕೆಲ್ಲ ಇದು ಹೇಗೆ ಅರ್ಥವಾಗಬೇಕು..??!
ನಿದ್ರಿಸಿದವರನ್ನು ಎಬ್ಬಿಸಬಹುದ೦ತೆ. ಆದರೆ, ನಿದ್ರಿಸಿದವನ೦ತೆ ನಟಿಸಿದವನನ್ನು ಎಬ್ಬಿಸಲಾಗದ೦ತೆ. ಅ೦ಥವರಿಗೆ ಅರ್ಥವಾಗುವುದು ಒ೦ದೇ ಮಾದರಿ.

ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ತಿಳಿಯುವಂತಾಗಬೇಕು ಅಲ್ಲಿಯವರೆಗೂ ಶೇರ್ ಮಾಡುತ್ತಲೇ ಇರಿ ...

ತಪ್ಪದೆ ಶೇರ್ /ಕಾಪಿ ಪೇಸ್ಟ್ ಮಾಡಿ

No comments: