Saturday, July 21, 2012

ಈಗ ಡಿಸೇಲ್ ರೇಟ್ ಕೂಡ ಮುಕ್ತ ಮುಕ್ತ ಮುಕ್ತ...


3G ಮೋಡ ಮಳೆಯಾಗಿ ಸುರಿದಾಗ ನಮ್ಮ ಹಣಕೆ ಮುಕ್ತಿ...
ಇಟಲಿ ಹಕ್ಕಿಯ ಮರಿ ರೆಕ್ಕೆ  ಬೀಸಿದರೆ ಸಿಂಗ್ ಪಟ್ಟಕ್ಕೆ ಮುಕ್ತಿ...
ನಮ್ಮ್ ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ
ಇಟಲಿಯ ಆಡಳಿತದಿಂದ ಮುಕ್ತ ಮುಕ್ತ ಮುಕ್ತ...

ಸೋನಿಯಾ ಎದುರು ಇದಿರಾಗಿ ಈಜಿ ದಡ ಸೇರುಬಹುದೇ ಜೀವ? ದಾಟಿ ಈ ಪ್ರವಾಹ
ನಾವು ಬೆಂದು ಇವ್ರಿಗೆ ಕಾಸು ನೀಡುತಿರೆ, ನಮ್ಗೆ ಇಟ್ರೋ ನಿಶ್ಚಯದ ಮೂತ್ರ ರೂಪ
ಇಟಲಿ ಮೊಗ್ಗಿನಿಂದ ಸೆರೆಯೊಡದ ರಾಹುಲ್ ಗಾಂಧಿ ನಮ್ಮಿಂದ ದೂರ್ ದೂರ ಎಲ್ಲುಂಟು ಇಟಲಿ ತೀರ
ಇಟಲಿ ಮೊಗ್ಗಿನಿಂದ ಸೆರೆಯೊಡದ ರಾಹುಲ್ ಗಾಂಧಿ ನಮ್ಮಿಂದ ದೂರ್ ದೂರ ಎಲ್ಲುಂಟು  ಇಟಲಿ ತೀರ


3G ಮೋಡ ಮಳೆಯಾಗಿ ಸುರಿದಾಗ ನಮ್ಮ ಹಣಕೆ ಮುಕ್ತಿ
ಈಗ ಡಿಸೇಲ್ ರೇಟ್ ಕೂಡ ಮುಕ್ತ ಮುಕ್ತ ಮುಕ್ತ...

Monday, May 7, 2012

ಗಡಿ ದಾಟಿ ಬಂದ ಅಣ್ಣಾಬಾಂಡ್ ಸಿನ್ಮಾದ ಬಗ್ಗೆ ಹಾಗೂ ನಮ್ಮ ಗಾಂಧಿನಗರದ ವೀರರ ಬಗ್ಗೆ ಕೂಡ




ಅಂತೂ-ಇಂತೂ ಕನ್ನಡದ ಒಂದು ಸಿನೆಮಾ ’ಅಣ್ಣಾಬಾಂಡ್’ಕರ್ನಾಟಕದ ಹೊರಗೆ ಮುತ್ತಿನನಗರಿ ಹೈದರಾಬಾದ್‍ನ ’ಪ್ರಸಾದ್ಸ್ (www.prasadz.com)’ನಲ್ಲಿ (ಬೆಂಗಳೂರಿನ PVR ತರಹ) ಬಿಡುಗಡೆ ಆಯ್ತು, ಇಲ್ಲಿರುವ ಕನ್ನಡಗಿರಿಗೆ ವಾರಂತ್ಯಕ್ಕೆ ನೋಡಕ್ಕೆ ಅಂತ ಒಂದೇ ಒಂದು ಕನ್ನಡ ಸಿನ್ಮಾ ಸಿಕ್ದಂಗಾಯ್ತು. ಆದ್ರೇ ಇಲ್ಲಿ ತೋರ‍್ಸಿದ್ದು, ಬರಿ ಎರಡು ದಿನಾ (ಮೇ 5 ಮತ್ತು 6 ರಂದು), ಎರಡು ಶೋ ಮಾತ್ರಾ. ಅಂಗಾಗಿ ಎರಡೂ ದಿನದ ಎರಡೂ ಶೋ ’ಹೌಸ್‍ಫ಼ುಲ್ಲ್’ ಆಗಿತ್ತು. ಇಲ್ಲಿನ ನಮ್ಮ ಕನ್ನಡಿಗರಿಗೆ ಕನ್ನಡದ ಸಿನ್ಮಾ ಬಂತಲ್ಲಾ ಅನ್ನೋದೇ ಒಂದು ಖುಷಿ, ಥಿಯೇಟರ್ ತುಂಬಾ ಆ ಎರಡು ದಿನ ಕನ್ನಡದ ಕಲರವ, ಸಿನ್ಮಾ ಸ್ಟಾಟ್ ಅಗೋಕ್ಕೆ ಮುಂಚೆ ’ಮುಂಗಾರು ಮಳೆ’ಯ ಹಾಡುಗಳ ಅಬ್ಬರ, ಒಟ್ನಲ್ಲಿ ಆ ಎರಡು ದಿನಗಳು ಅಲ್ಲಿ ಬರೀ ಕನ್ನಡ, ಕನ್ನಡ, ಕನ್ನಡ.

ವಿಪರ್ಯಾಸ ನೋಡಿ, ನಮ್ಮ ಮಹಾ ಬೆಂಗಳೂರಿನಲ್ಲಿರೋ ತೆಲುಗು ಭಾಷಿಕರಿಗಿಂತ, ಜಾಸ್ತಿ ಕನ್ನಡದೋರು ’ಹೈದರಾಬಾದ್’ನಲ್ಲಿದಾರೆ. ಆದ್ರೇ, ನಮ್ಮ ಸ್ಯಾಂಡಲ್‍ವುಡ್ ಜನ ಯಾಕೋ, ಇಲ್ಲಿ ಕನ್ನಡದ ಸಿನ್ಮಾ ಹಾಕೋದೇ ಇಲ್ಲ. ಇಲ್ಲಿನ ಕನ್ನಡದ ಮಾರ್ಕೆಟ್‍ನ ಎನ್‍ಕ್ಯಾಶ್ ಮಾಡ್ಕೊಳೋದೇ ಇಲ್ಲ. ಅಂಗಾಗಿ, ನಮ್ಮ ಕನ್ನಡದ ಸಿನ್ಮಾಗಳು ಕರ್ನಾಟಕದ ಗಡಿ ಬಿಟ್ಟು ಕದಲೋದೆ ಇಲ್ಲಾ. ನಮ್ಮೋರೂ ಕೂಡ, ತೆಲುಗು, ತಮಿಳು, ಮಲಯಾಳಂ ಸಿನೆಮಾದೋರ್ ತರಹ, ನಮ್ಮ ಕನ್ನಡದೋರು ಜಾಸ್ತಿ ಇರೋ, ಹೈದರಾಬಾದ್, ಅನಂತಪುರ, ಕಾಸರಗೋಡು, ಸೊಲ್ಲಾಪುರ, ಬಾಂಬೆ, ಹೊಸೂರು, ಮದ್ರಾಸು, ಇಂತಾ ಕಡೆ ಕನ್ನಡದ ಸಿನ್ಮಾಗಳನ್ನ ಪ್ರಚಾರ ಮಾಡಿ, ಹೆಚ್ಚು, ಹೆಚ್ಚು ಬಿಡುಗಡೆ ಮಾಡ್ಬೇಕು. ಇಲ್ಲಿನ ಹೀರೋಗಳು (ತೆಲುಗು, ತಮಿಳು, ಮಲಯಾಳಂ), ನಮ್ಮ ಬೆಂಗಳೂರಿಗೆ ಬಂದು ಹೆಂಗೆ ತಮ್ಮ ಸಿನ್ಮಾಕ್ಕೆ ಪ್ರಚಾರ ಕೋಡ್ತಾರೊ ಅಂಗೇನೆ, ನಮ್ಮ ಕನ್ನಡದ ಕಂದಮ್ಮಗಳು ಕೂಡ ಕರ್ನಾಟಕ ಬಿಟ್ಟು, ಹೊರಗಡೆ ತಮ್ಮ ಸಿನೆಮಾಕ್ಕೆ ಮಾರ್ಕೇಟ್ ಸೃಷ್ಟಿ ಮಾಡ್ಕ್ಲೋಬೇಕು. ಕನ್ನಡಿಗರು ಇರೋ ಕಡೇ, ಕನ್ನಡದ ಸಿನ್ಮಾಗಳಿಗೆ ಖಂಡಿತ ಪ್ರೋತ್ಸಾಹ ಇದ್ದೇ ಇದೆ. ಆದ್ರೇ ಸಿನ್ಮಾನೇ ಬರ್ನಿಲ್ಲ ಇಲ್ಲಿ ಅಂದ್ರೇ, ಪ್ರೋತ್ಸಾಹ ಹೆಂಗ್ ಕೊಡ್ಬೇಕು ಹೇಳಿ.

ಬೆಂಗಳೂರಲ್ಲಿ,  ಬೇರೆ ಭಾಷೆಯ ಸಿನ್ಮಾ ಅಷ್ಟು ಥಿಯೇಟರ‍್ನಲ್ಲಿ ಬಿಡುಗಡೆ ಆಯ್ತು, ಇಷ್ಟು ಥಿಯೇಟರ‍್ನಲ್ಲಿ ಬಿಡುಗಡೆ ಆಯ್ತು,  ಅನ್ನೋದನ್ನೆ ದಿನ ಕನ್ನಡದ ಪೇಪರ‍್ನಲ್ಲಿ, ಟಿವಿಗಳಲ್ಲಿ ದಿನಾ ಕೇಳ್ತಾನೇ ಇರೋದೇ ಹಾಗೋಯ್ತು ನಮ್ಮ ಜನ್ಮಕ್ಕೆ.  ನಮ್ಮ ಕನ್ನಡದ ಸಿನ್ಮಾಗಳೂ ಕೂಡ ಬೇರೆ ರಾಜ್ಯಗಳಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಬಿಡುಗಡೆ ಆಗೋದು ಯಾವಾಗ? ಯಾಕೆ ನಮ್ಮ ’ಗಾಂಧಿನಗರದ’ ವೀರರು, ಇಂತಾ ಪ್ರಯತ್ನಕ್ಕೆ  ಕೈ ಹಾಕ್ಬಾರ‍್ದು ಅಂತಿನಿ. ಸರಿ ಇನ್ನು ’ಅಣ್ಣಾಬಾಂಡ್’ ವಿಷ್ಯಕ್ಲೆ ಬರೋಣ.

ಈ ’ಅಣ್ಣಾಬಾಂಡ್’ ಸಿನ್ಮಾ ನೋಡಿದ್ಮೇಲೆ , ’ದುನಿಯಾ’, ’ಇಂತಿ ನಿನ್ನ ಪ್ರೀತಿಯ’, ’ಜಾಕಿ’ ಇಂತಾ ಒಳ್ಳೇ ಸಿನ್ಮಾಗಳನ್ನ ಕೊಟ್ಟಿರೋ ’ದುನಿಯಾ ಸೂರಿ’ಯ ಬತ್ತಳಿಕೆಯಲ್ಲಿ, ಬಾಣಗಳು ಕಾಲಿ ಆಯ್ತೆನೋ ಅನ್ನೋ ಸಂಶಯ ಮೂಡೋದು ಸಹಜ ಮತ್ತೇ ಅಷ್ಟರಮಟ್ಟಿಗೆ ಸತ್ಯ ಅಂತೂ ಹೌದು. ’ಪುನೀತ್’ ಹೆಸರಲ್ಲಿ ಮಾತ್ರ ಸಿನ್ಮಾ ಓಡ್ಬೋದೋ ಹೊರತು, ’ಸೂರಿ’ ನಿರ್ದೇಶನದಿಂದ ಮಾತ್ರ ಅಲ್ಲಾ. ಇಲ್ಲಿ ಹಿಂಸೆ ಮತ್ತು ಸೆಕ್ಸ್ ಸೀನ್‍ಗಳು ಜಾಸ್ತಿ ಆಯ್ತೆನೋ ಅನ್ನೋದು ಮಾತ್ರ ವಾಸ್ತವ, ಅದೂ ’ರಾಜ್‍ಕುಮಾರ್’ ಮನೆತನದ ನಿರ್ಮಾಣದ ಸಿನೆಮಾಗಳಿಗೆ ಇದು ಅಪವಾದಾನೆ ಸರಿ.

’ಹೀ ಈಸ್ ಅಣ್ಣಾಬಾಂಡ್’ ಅನ್ನೋ ಹಾಡಿಗೂ ಹಾಗೂ’ಜಾಕಿ’ ಸಿನ್ಮಾದ ’ಜಾಕಿ, ಜಾಕಿ, ಜಾಕಿ, ಜಾಕಿ,... ಹಾಡಿಗೂ’ ಒಂದು ಸಾಮ್ಯತೆ ಇದೆ. ಬಹುಶ: ಎರಡೂ ಹಾಡುಗಳಿಗೆ, ನೃತ್ಯ ನಿರ್ದೇಶಕ ಒಬ್ನೆ ಇರಬೇಕು, ಅನ್ನೋ ಅಷ್ಟರ ಮಟ್ಟಿಗೆ, ’ಅಣ್ಭ್ಣಾಬಾಂಡ್’ ಹಾಡು, ’ಜಾಕಿ’ ಹಾಡಿನ ಮುಂದುವರೆದ ಭಾಗದಂತಿದೆ; ಇದು ಹೊಗಳಿಕೆ ಮಾತ್ರ ಅಲ್ಲಾ.

ಸಿನೆಮಾದಲ್ಲಿ ಹೊಸದಾಗೀ ಕಾಣೋದು, ’ಅಣ್ಣಾಬಾಂಡ್’ನ ’ಮೋಟರ್-ಸೈಕಲ್ ಮತ್ತು ’ಮೊಬೈಲ್ ಮನೆ’ ಮಾತ್ರಾ. ಪ್ರಿಯಾಮಣಿ ಅನ್ನೋ ನಾಯಕಿ ದಪ್ಪ ಆಗಿ ಬೇರೆ ಕಡೆ ಮಾರ್ಕೆಟ್‍ ಇಲ್ದೇ ಇರೋದ್ರಿಂದ ’ಕನ್ನಡಮ್ಮನ’ ಸೇವೆಗೆ ಬಂದಿದಾಳೆ ಅನ್ಸುತ್ತೆ. ಸೈಜ್‍ನಲ್ಲಿ, ಆಕ್ಟಿಂಗ್‍ನಲ್ಲಿ ಕನ್ನಡಮ್ಮನ ಮಗಳು ’ನಿಧಿ ಸುಬ್ಬಯ್ಯ’ ದಪ್ಪ ಪ್ರಿಯಾಮಣಿಗಿಂತ ಓಕೆ. ಇನ್ನು ಕನ್ನಡದಲ್ಲೇ ಒಳ್ಳೊಳ್ಳೇ ವಿಲನ್‍ಗಳಿರುವಾಗ ’ಜಾಕೀಶ್ರಾಪ್’ನ ಕರ‍್ಕೊಂಡ್ ಬರೋ ಅವಶ್ಯಕತೆ ಇರಲಿಲ್ಲಾ, ಜೊತೆಗೆ ’ಜಾಕೀಶ್ರಾಪ್’ಗೆ ಬೇರೆ ಯಾರಾದ್ರೂ ಡಬ್ ಮಾಡಿದ್ರೇ ಚೆನ್ನಾಗಿರ‍್ತಿತ್ತು.

’ರಂಗಯಣ ರಘು ಮತ್ತೆ ಪುನೀತ್’ ಇಬ್ರ ನಟನೇ ಬಗ್ಗೆ ಯಾರು ಕೆಮ್ಮಂಗಿಲ್ಲ ಅನ್ನೋ ಅಷ್ಟರಮಟ್ಟಿಗಿದೆ ಅವರ ನಟನೆ. ಸಿನೆಮಾದ ಹಾಡುಗಳು ಓಕೆ, ಆದ್ರೆ ಇದು ’ದುನಿಯಾ ಸೂರಿ’ ಸಿನ್ಮಾ ಮಾತ್ರ ಅಲ್ಲಾ ಯಾಕೇ? ಅನ್ನೋದೆ ಯಕ್ಷಪ್ರಶ್ನೆ. ಓಟ್ನಲ್ಲಿ, ಒಂದು ಸಲ ನೋಡಕ್ಕೆ ಸಿನ್ಮಾ ಓಕೆ, ಎರಡನೇ ಸಲ ಥಿಯೇಟರ್ ಕಡೆ ತಿರುಗಿ ನೋಡಕ್ಕೆ ಆಗಲ್ಲ ಅನ್ನೋದೇ ಬೇಜಾರು.

ರಾಜ್‍ಕುಮಾರ್ ಅಭಿಮಾನಿಗಳಿಗಳನ್ನ ಆಕರ್ಷಿಸೋಕ್ಕೆ ಸಿನ್ಮಾಕ್ಕೆ ’ಅಣ್ಣಾ’ ಅಂತಾ ಹೆಸ್ರು ಸ್ಟಾಟ್ ಮಾಡಿದಾರೆ, ಆದ್ರೆ ಬಾಂಡ್‍ಗೂ ಇದಕ್ಕೂ ಏನೂ ಸಂಬಂದ ಇಲ್ಲ, 

ಸೂರಿ ಬಗ್ಗೆ ಹೇಳ್ಬೇಕು ಅಂದ್ರೇ.....
ಕಾಣದಂತೆ ಮಾಯವಾದನೋ, ನಮ್ಮ ಸೂರಿ ಕೈಲಾಸ ಸೇರಿಕೊಂಡನೋ???!!!!!
’ದುನಿಯಾ’ವನ್ನು ಕೊಟ್ಟೂ, ’ಇಂತಿ ನಿನ್ನ ..... ’ ಯನ್ನು ಬಿಟ್ಟು ಕೈಯ ಕಟ್ಟಿ ಓಡಿ ಹೋದನೋ..
.
.
.
’ದುನಿಯಾನ’ ಮೇಲೆ ಇಟ್ಟನೋ ನಮ್ಮ ಸೂರಿ, ’ಅಣ್ಣಾಬಾಂಡ್‍ನ’ ಪಾತಳಕ್ಕಿಟ್ಟನೋ,
ನಾವೂ-ನೀವೂ ಸೇರಿಕೊಂಡು ಸಿನ್ಮಾವನ್ನು ನೋಡುವಾಗ..... ಕಾಣದಂತೆ, ಸೂರಿ ಕಾಣದಂತೆ ಉಂಡೆ ನಾಮ ಇಟ್ಟನೋ!!!!!!!

ಇಷ್ಟೆಲ್ಲದರ ಮಧ್ಯೆ, ನಮ್ಮ ಕನ್ನಡದ ಸಿನ್ಮಾ ಗಡಿದಾಟಿ ಹೈದರಾಬಾದ್‍ಗೆ ಬಂತಲ್ಲಾ ಅನ್ನೋದೇ ಒಂದ್ ಖುಷಿ. ಆ ಖುಷಿನಲ್ಲೇ, ಕನ್ನಡದ ಕಲರವ ನೋಡಕ್ಕೆ, ನಾ ಮಾತ್ರ ಸಿನ್ಮಾಕ್ಕೆ ಎರಡುಸಲ ಹೋಗಿದ್ದು ಮಾತ್ರಾ ನಿಜ. ಕನ್ನಡದ ಸಿನ್ಮಾಗಳೂ ಇಂಗೆ ಬರ್‍ತಾ ಇರಲಿ......... ಎಲ್ಲಾ ಗಡಿಗಳನೂ ದಾಟಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.