Tuesday, July 14, 2015

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ
*****************************************************
 ಮಹಾಭಾರತದ ಎರಡು ಪ್ರಮುಖ ಪಾತ್ರಗಳು. #ಧೃತರಾಷ್ಟ, #ಪಾಂಡು.
.
.
ಧೃತರಾಷ್ಟನ ಅತಿಯಾದ ಪುತ್ರಪ್ರೇಮ, ಪಾಂಡುವಿನ ಮಕ್ಕಳಿಂದ ಸಾಮ್ರಾಜ್ಯವನ್ನ ಮೋಸದಿಂದ ಕಿತ್ಕೊಳ್ಳೋ ತರ ಮಾಡ್ತು. ತಾನು ಕುರುಡ ಎನ್ನುವ ಕಾರಣಕ್ಕೆ, ನಂಗೇ ರಾಜ್ಯಾಧಿಕಾರ ಸಿಗಲಿಲ್ಲಾ, ಅಂಗಾಗಿ, ನನ್ನ ಮಗನಿಗಾದರೂ ಸಿಗಲಿ ಅನ್ನೋದು ಧೃತರಾಷ್ಟನ ವಾದ. ಆದ್ರೆ, ರಾಜನಾಗೋಕ್ಕೇ ಬೇಕಾದ ಗುಣಗಳು ಧುರ್ಯೋಧನನಲ್ಲಿ ಇಲ್ಲಾ ಅನ್ನೋದು ಹಿರಿಯರ, ಜನರ ಅಭಿಮತ.


ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ ಅನ್ನೋದು ಮಾತಾದ್ರೂ, ಕುಂತಿಯ ಆ ಮಕ್ಕಳು, ಕೆಲ ಕಾಲ ಧರ್ಮದಿಂದ ರಾಜ್ಯವನ್ನ ಆಳಿ, ಆ ರಾಜ್ಯವನ್ನ ಉತ್ತುಗ್ಗಂಕೊಯ್ದರು ಅನ್ನೋದು ಸಹ ಅಷ್ಟೇ ಸತ್ಯ.
.
.
ತೆಲುಗಿನ, #ಬಾಹುಬಲಿ ಚಿತ್ರವನ್ನ ನೋಡಿದಾಗ, ನನಗಂತೂ ಧೃತರಾಷ್ಟನ ಪುತ್ರಪ್ರೇಮ, ಪಾಂಡವರ ಪರಿಪಾಟಲು ನೆನಪಿಗ್ ಬಂತು.
.
.
ಸಿನ್ಮಾ ಶುರುವಾಗ್ತಿದ್ದ ಹಾಗೇ, ರಾಜಮಾತೆ #ಶಿವಗಾಮಿ (ರಮ್ಯಕೃಷ್ಣ) ತನ್ನದೇ ಸಾಮ್ರಾಜ್ಯದ (#ಮಾಹಿಷ್ಮತಿ) ಭಟರಿಂದ ಮಗುವೊಂದನ್ನು (ಮಾಹಿಷ್ಮತಿ ಸಾಮ್ರಾಜ್ಯದ  #ಅಮರೇಂದ್ರಬಾಹುಬಲಿಯ ಮಗ) ರಕ್ಷಿಸಲು, ತಪ್ಪಿಸಿಕೊಂಡು ಬರ‍್ತಾ ಇರ‍್ತಾಳೆ, ತಾನು ಗಾಯಗೊಂಡಿದ್ದರೂ, ವೀರಾವೇಶದಿಂದ ಆ  ಮಗುವನ್ನು ಕಾಪಾಡಿ, ನೀರಲ್ಲಿ ಮುಳುಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದರೂ ಸಹ, ತನ್ನ ಆತ್ಮಶಕ್ತಿಯೋ, ಇಲ್ಲಾ ಬೇರಾವ ಶಕ್ತಿಯ ಕಾರಣದಿಂದಲೋ, ತನ್ನ ಕೈಯಲ್ಲಿ ಆ ಮಗುವನ್ನ ಹಾಗೇ ನೀರಲ್ಲಿ ಹಿಡಿದುಕೊಂಡು,  ಅದನ್ನ ಅಲ್ಲೇ ಜಲಪಾತದ ಕೆಳಗೆ ವಾಸಿಸುವ ಕಾಡ ಜನರ ಹತ್ತಿರಕ್ಕೆ ಸೇರಿಸಿ ತಾನು ನೀರಲ್ಲ್ ಹೊಂಟೋಗ್ತಾಳೆ, ಆ ಮಗು #ಶಿವುಡು (ಪ್ರಭಾಸ್) ಹೆಸರಿನಲ್ಲಿ ಕಾಡುಜನರ ಜೊತೆಯಲ್ಲಿ ಬೆಳೆಯುತ್ತಾನೆ.
.
.
ಶಿವುಡುವಿಗೆ (ಪ್ರಭಾಸ್) ತಾನು ವಾಸಿಸುವ ಜಾಗದ ಪಕ್ಕದಲ್ಲೇ ಇರುವ, ಬೃಹತ್ ಜಲಪಾತದ ಆಚೆ ಏನಿರಬೋದು ಅನ್ನೋ ಕುತೂಹಲ ದಿನೇ ದಿನೇ ಕಾಡ್ತಾ ಇರುತ್ತೆ, ಹಾಗಾಗಿ, ಆ ಜಲಪಾತದ ಆಚೆಗೆ ಹೋಗಲು ಆತ ವಿಫಲ ಪ್ರಯತ್ನಗಳನ್ನ ನಡೆಸ್ತಾ ಇರ‍್ತಾನೆ. ಹಾಗೇ, ಒಂದ್ಸಲ, ಜಲಪಾತದ ಮೇಲಿಂದ ಬಂದಂತಾ ಮುಖವಾಡವೊಂದು ಸಿಕ್ಕಿ ಆ ಮುಖವಾಡದ ಹಿಂದಿನ ಆಕೃತಿ ಯಾವುದು ಅನ್ನೋದನ್ನ ಕಂಡಿಡಿಯಕ್ಕೆ , ಆತ ಜಲಪಾತವನ್ನ ಏರಿ, ಆ ಕಡೆ ಇರೋ #ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಸಾಮ್ರಾಜ್ಯಕ್ಕೆ ತಲುಪಿ ಬಿಡುತ್ತಾನೆ. ಅಲ್ಲಿನ ಜಲಪಾತದ ದೃಶ್ಯ, ಕಾಡಿನ ದೃಶ್ಯ, ನೈಜತೇ ಅನ್ನೋ ತರ ಮೂಡಿ ಬಂದಿವೆ.
.
.
ಅಲ್ಲಿಗೆ ತಲುಪಿದ ಅವನಿಗೆ #ಅವಂತಿಕ (ತಮನ್ನ) ಸಿಗುತ್ತಾಳೆ. ಆಕೆ ಮತ್ತವರ ಕಡೆಯವರು, ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಸೆರೆಯಾಳಾಗಿ ಶಿಕ್ಷೆ ಅನುಭವಿಸುತ್ತಿರುವ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಪತ್ನಿಯಾದ / ರಾಣಿಯಾದ #ದೇವಸೇನಳನ್ನ (ಅನುಷ್ಕಾ), ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಕಪಿಮುಷ್ಟಿಯಿಂದ ಬಿಡಿಸಿ ತರಲು ನಾನಾ ಯೋಜನೆಗಳನ್ನ ಹಾಕಿಕೊಂಡು, ವಿಫಲರಾಗಿರುತ್ತಾರೆ. ಆ ಸಮಯದಲ್ಲೇ, ಈ ಶಿವುಡು (ಪ್ರಭಾಸ್) ಮತ್ತು ಅವಂತಿಕಳ (ತಮನ್ನ) ಮಧ್ಯೆ ಘಟಿಸಿದ ಪ್ರೇಮದಿಂದ, ಅವಂತಿಕಳಿಗೆ (ತಮನ್ನ) ವಹಿಸಿದ್ದ ದೇವಸೇನಳ (ಅನುಷ್ಕಾ) ಬಿಡುಗಡೆಯ ಕಾರ್ಯವನ್ನ,  ಈ ಶಿವುಡು (ಪ್ರಭಾಸ್) ತಾನು ವಹಿಸಿಕೊಂಡು ಮಾಹಿಷ್ಮತಿಯ ಅರಮನೆಗೆ ಹೊರಡುತ್ತಾನೆ.
.
.
ಆಗ ಅಲ್ಲಿ, ಬಲ್ಲಾಳದೇವನ (ರಾಣಾ ದುಗ್ಗಬಾಟಿ) ದೊಡ್ಡ ಪ್ರತಿಮೆಯನ್ನು ಮೇಲೆತ್ತಿ ನಿಲ್ಲಿಸಲು ಜನರು ತುಂಬಾ ಶ್ರಮಪಡುತ್ತಿರುತ್ತಾರೆ, ಮತ್ತದರಲ್ಲಿ ಅವರು ವಿಫಲರಾಗಿ, ಆ ಪ್ರತಿಮೆಗೆ ಕಟ್ಟಿರೋ ಹಗ್ಗವನ್ನ ಬಿಟ್ಟುಬಿಡುತ್ತಾರೆ. ಆಗ, ಸಡನ್ನಾಗಿ ಬಂದ ಈ ಶಿವುಡು (ಪ್ರಭಾಸ್) ಜನರ ಮೇಲೆ  ಬೀಳುತ್ತಿರುವ ಪ್ರತಿಮೆಯನ್ನು, ಅದಕ್ಕೆ ಕಟ್ಟಿರುವ ಹಗ್ಗದಿಂದ ಹಿಡಿದು, ಆ ಜನರಿಗೆ ಸಹಕರಿಸುತ್ತಾನೆ. ಆಗ ಅಲ್ಲಿ ಇವನ ಮುಖ ನೋಡಿದ ಜನರು "ಬಾಹುಬಲಿ, ಬಾಹುಬಲಿ" ಅಂತಾ ಕೂಗ್ತಾ ಇರ‍್ತಾರೆ. ಆದ್ರೆ, ಬಾಹುಬಲಿ ಅಂದ್ರೆ ಯಾರೂ, ಏನೂ, ಎತ್ತಾ ಎಂಬುದರ ಪರಿವೆಯಿಲ್ಲದ ಶಿವುಡು (ಪ್ರಭಾಸ್), ಮಾಹಿಷ್ಮತಿಯ ಯುವರಾಜ (ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಮಗ) ಮತ್ತು ಸೇನಾಪತಿ #ಕಟ್ಟಪ್ಪ (ಸತ್ಯರಾಜ್) ನಿಂದ ತಪ್ಪಿಸಿಕೊಂಡು, ದೇವಸೇನಳನ್ನು (ಅನುಷ್ಕಾ) ಕರೆತರುತ್ತಾನೆ. ಆಗ ನಡೆಯೋ ಕಾಳಗದಲ್ಲಿ ಶಿವುಡು (ಪ್ರಭಾಸ್) ಮಾಹಿಷ್ಮತಿಯ ಯುವರಾಜನ ತಲೆಯನ್ನು ಕಡಿದಾಕುತ್ತಾನೆ. ತದನಂತರ ಕಟ್ಟಪ್ಪ  (ಸತ್ಯರಾಜ್) ಶಿವುಡುವನ್ನು (ಪ್ರಭಾಸ್) ಗುರುತಿಸಿ, ಹಿಂದಿನ ಕಥೆಯನ್ನ ಆತನಿಗೆ ಹೇಳುತ್ತಾನೆ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್), ಶಿವುಡುವಿನ ತಂದೆ ಮತ್ತು ಬಲ್ಲಾಳದೇವ (ರಾಣಾ ದುಗ್ಗಬಾಟಿ) ಇಬ್ಬರೂ ಸಹ ತಮ್ಮ ಶೌರ್ಯ ಸಾಹಸಗಳಿಂದ, #ಕಾಲಕೇಯನೆಂಬ (ಪ್ರಭಾಕರ್) ದೈತ್ಯನೆದುರು ಯುದ್ಧದಲ್ಲಿ ಜಯಿಸಿಸುತ್ತಾರೆ.
.
.
ಆದರೆ, ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) "ನೂರು ಶತ್ರುಗಳನ್ನು ಕೊಂದವನು ವೀರನೆನಿಸಿಕೊಳ್ಳುತ್ತಾನೆ. ಆದರೆ ಒಂದೇ ಒಂದು ಪ್ರಜೆಯ ಜೀವವನ್ನು ಉಳಿಸಿದವನು ರಾಜನೆನಿಸಿಕೊಳ್ಳುತ್ತಾನೆ" ಎಂದೇಳಿ, ಬಲ್ಲಾಳದೇವನನ್ನು (ರಾಣಾ ದುಗ್ಗಬಾಟಿ)  ಸಾಮ್ರಾಜ್ಯದ ಸೇನಾಪತಿಯನ್ನಾಗಿ ಅರಿಸಿ, ಅಮರೇಂದ್ರ ಬಾಹುಬಲಿ (ಪ್ರಭಾಸ್)ಯನ್ನು ಮಾಹಿಷ್ಮತಿ ಸಾಮ್ರಜ್ಯದ ಸಿಂಹಾಸನಕ್ಕೆ ಅಧಿಪತಿಯನ್ನಾಗಿ ಆರಿಸುತ್ತಾಳೆ. ಅದೂ, ಬಲ್ಲಾಳದೇವನು (ರಾಣಾ ದುಗ್ಗಬಾಟಿ) ತನ್ನ ಸ್ವಂತ ಮಗನಾಗಿದ್ದಾಗಿಯೂ ಸಹ.

ಕಾರಣ ಏನೋ ಎತ್ತೋ ಗೊತ್ತಿಲ್ಲಾ, ಆದರೆ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಕೊಲೆಯಾಗಿ, ಆತನ ಮಗುವನ್ನು ಈ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ)  ಕಾಪಾಡುತ್ತಾಳೆ.
.
.
ಈ ಬಾಹುಬಲಿ ಸಿನೆಮಾದ ಮೊದಲ ಭಾಗದ ನಿಜವಾದ ಹೀರೋ ಅಂದ್ರೇ ಅದು ಬಲ್ಲಾಳದೇವನೇ (ರಾಣಾ ದುಗ್ಗಬಾಟಿ) ಸರಿ. ಆ ಪಾತ್ರದ ದರ್ಪ, ಕುತಂತ್ರ, ಅಹಂಕಾರ, ದಮ್ಮು, ವೈಭೋಗ ನಿಜಕ್ಕೂ ದುರ್ಯೋಧನನ್ನ ನೆನಪಿಗೆ ತರುತ್ತೆ. ಅಂತಾ ಧುರ್ಯೋಧನ ಪಾತ್ರದ ವ್ಯಕ್ತಿಗೆ, ಧೃತರಾಷ್ಟ್ರನಂತಾ ಅಪ್ಪಾ ಬಿಜ್ಜಳದೇವ (ನಾಸಿರ್) ಡಿಟ್ಟೋ  ಧೃತರಾಷ್ಟ್ರನ ತರವೇ ಪುತ್ರಪ್ರೇಮಿ!!!
.
.
ಆ ಪಾತ್ರ ಪೋಷಣೆಗೆ, ರಾಣ ಪಟ್ಟಿರುವ ಶ್ರಮ ಸಿನ್ಮಾದಲ್ಲಿ ಎದ್ದು ಕಾಣುತ್ತೆ. ಯುದ್ಧ ಸನ್ನಿವೇಶ, ಅಲ್ಲಿ ಆತನ ಅಬ್ಬರ, ಪರಾಕ್ರಮ, ಆತ ಬಳಸಿರೋ ಆಯುಧಗಳು, ನಿಜಕ್ಕೂ ಸೂಪರ್ರ್! ಇಂತಾ ದುರ್ಯೋಧನಂತಾ ಪಾತ್ರಧಾರಿಗೆ, ಅಲ್ಲಿ ಸಿಕ್ಕಿರೋ ಆಯುಧ ಗದೆ! ಅದೂ, ಗದೆಯ ಹಿಡಿಯೊಳಗೆ ಸರಪಳಿಯನ್ನಾಕಿ, ಆ ಸರಪಳಿಗೆ ಗದೆಯ ಮುಂದಿನ ಭಾಗವನ್ನ ಜೋಡಿಸಿ, ಅದನ್ನ ಬಳಸೋ ಶೈಲಿ ನಿಜಕ್ಕೂ ಅದ್ಭುತ.
.
.
ಬಾಹುಬಲಿ ಸಿನ್ಮಾ, ಐತಿಹಾಸಿಕ ಕಥೆಯುಳ್ಳ ಸಿನೆಮವೂ ಅಲ್ಲಾ ಅಥವಾ ಪೌರಾಣಿಕ ಕಥೆಯುಳ್ಳ ಸಿನೆಮಾವೂ ಅಲ್ಲಾ, ಅದೊಂದು ಕಾಲ್ಪನಿಕ ಕಥೆಯಷ್ಟೇ. ಮತ್ತೆ ಈ ಸಿನೆಮಾಕ್ಕೂ, ನಮ್ಮ್ ಅಣ್ಣೋರ ಮಯೂರ ಸಿನೆಮಾಕ್ಕೂ ಸಹ ಯಾವುದೇ ಸಂಬಂಧ ಇಲ್ಲಾ, ಮೊದಲಿಗೆ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) ಮಗುವನ್ನ ರಕ್ಷಿಸುವ ಸೀನೊಂದನ್ನೊರತುಪಡಿಸಿ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್)  ಹಾಗೂ ಬಲ್ಲಾಳದೇವ (ರಾಣಾ ದುಗ್ಗಬಾಟಿ) ಎಂಬ ಎರಡು ಪ್ರಮುಖ ಪಾತ್ರಗಳ ನಡುವೆ ಸಿಂಹಾಸನಕ್ಕಾಗಿ ನಡೆಯುವ ಜಿದ್ದಾಜಿದ್ದಿ , ಮತ್ತದಕ್ಕೆ ಸಂಬಂಧಿತ ಘಟನೆಗಳ ಸಮಗ್ರ ಮಿಶ್ರಣವೇ " ಬಾಹುಬಲಿ" ಯ ಕಥಾವಸ್ತು.
.
.
ಅಷ್ಟು ದೊಡ್ಡ ಶಿವಲಿಂಗವನ್ನ ಒಬ್ಬನೇ ಎತ್ತಿಕೊಂಡು, ಜಲಪಾತದಲ್ಲಿ ನೀರು ಬೀಳುವ ಜಾಗಕ್ಕೆ ಆ ಶಿವಲಿಂಗವನ್ನ ಇಡುವ ಸಾಹಸಿ ಆ ಶಿವುಡು  (ಪ್ರಭಾಸ್),

ನೂರಾರು ಅಡಿ ಎತ್ತರದ ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಚಿನ್ನದ ಪ್ರತಿಮೆಯನ್ನು, ಹಿಡಿದುಕೊಳ್ಳಲಾಗದೇ, ಅದಕ್ಕೆ ಕಟ್ಟಿದ್ದ ಹಗ್ಗವನ್ನ ಎಲ್ಲರೂ ಬಿಟ್ಟ ನಂತರವೂ ಸಹ, ಒಬ್ಬನೇ ಆ ಹಗ್ಗವನ್ನ ಹಿಡಿದು, ಜನರಮೇಲೆ ಬೀಳುತ್ತಿದ್ದ ಆ ಪ್ರತಿಮೆಯನ್ನ ಹಿಡಿದು ನಿಲ್ಲಿಸುವ ಸಾಹಸಿ ಶಿವುಡು  (ಪ್ರಭಾಸ್),

ಸೈನಿಕರಿಂದ ಸುತ್ತುವರೆದ, ಒಳ್ಳೇ ಕಾವಲುಗಾರರನ್ನೊಂದಿರುವ ಕೋಟೆಯನ್ನು ಸುಲಭವಾಗಿ ಹತ್ತುವ ಸಾಹಸಿ ಶಿವುಡು  (ಪ್ರಭಾಸ್).

ಇವು ನೋಡುಗರಿಗೆ ಅತಿರೇಕವೆನಿಸಿದರೂ, ತೆಲುಗಿನ ಬಹುತೇಕ ಸಿನೆಮಾಗಳಲ್ಲಿ ಇದು ಕಾಮನ್ ವಿಷ್ಯ. ಹಾಗಾಗಿ, ಯಾವುದೇ ಲಾಜಿಕ್ಕು, ಮ್ಯಾಜಿಕ್ಕಿನ ಬಗ್ಗೆ ಯೋಚಿಸದೇ ಇಂತಾ ದೃಶ್ಯಗಳನ್ನ ನೋಡಿದರೆ ಓಕೆ, ಇಲ್ಲಾಂದ್ರೆ ನೀವ್ ಸುಖಾಸುಮ್ಮನೇ ತಲೆ ಕೆಡುಸ್ಕೊಬೇಕಾಯ್ತದೆ ಅಷ್ಟೇ.
.
.
ರಾಜಮಾತೆ ಶಿವಗಾಮಿಯ (ರಮ್ಯಕೃಷ್ಣ) ಗತ್ತು, ಗಮ್ಮತ್ತು ನಿಜಕ್ಕೂ ಸೂಪ್ಪರ್!

ಸೇನಾಪತಿ ಕಟ್ಟಪ್ಪನ (ಸತ್ಯರಾಜ್)  ಆರ್ಭಟ, ಪರಾಕ್ರಮವನ್ನ ನೋಡಿದಾಗ, ಮೊದಲ ಭಾಗದ ಈ ಸಿನೆಮಾಕ್ಕೆ ಬಾಹುಬಲಿ ಎಂಬ ಹೆಸರಿನ ಬದಲಿಗೆ ಕಟ್ಟಪ್ಪ ಅಂತಿಟ್ಟದ್ದರೇ ಇನ್ನೂ ಸೊಗಸಾಗಿರುತ್ತಿತ್ತೇನೋ ಅನ್ಸುತ್ತೆ, ಅಷ್ಟರ ಮಟ್ಟಿಗೆ ಸತ್ಯರಾಜ್ ಪಾತ್ರ ಪೋಷಣೆ ಮಾಡಿದ್ದಾರೆ.


ಕಾಲಕೇಯನ (ಪ್ರಭಾಕರ್)  ಪಾತ್ರಧಾರಿಯ ಭಯಂಕರ ರೂಪ, ಅವರಾಡುವ ಭಾಷೆ, ಆತನ ರುದ್ರಾವತಾರ, ನಿಜಕ್ಕೂ ಅದ್ಭುತ ಅನ್ನುವಷ್ಟರ ಮಟ್ಟಿಗೆ ಮೂಡಿ ಬಂದಿದೆ.


ಪರ್ಷಿಯನ್ ಶಸ್ತ್ರಾಸ್ತ್ರ ಪೂರೈಕೆದಾರ (#ಅಸ್ಲಂಖಾನ್ (ಸುದೀಪ್) ಪಾತ್ರದಲ್ಲಿನ ಸುದೀಪ್, ಒಂದೆರಡು ನಿಮಿಷಕ್ಕೆ ಮಾತ್ರ ಈ ಚಿತ್ರದಲ್ಲಿ ಸೀಮಿತ.


ಇಂಟರ್‌ವೆಲ್ ನಂತರ ನಡಿಯೋ ಯುದ್ಧದ ಸನ್ನಿವೇಶ ಮಾತ್ರ ನಿಜಕ್ಕೂ ಅದ್ಭುತವಾಗಿದೆ.


ಬಾಹುಬಲಿ ಚಿತ್ರಕ್ಕೆ ಸದ್ಯಕ್ಕೆ ಕ್ಲೈಮ್ಯಾಕ್ಸ್ ಇಲ್ಲಾ, ಜಸ್ಟ್ ಇಂಟರ್‌ವೆಲ್. ಸಿನ್ಮಾಸ್ ಕ್ಲೈಮ್ಯಾಕ್ಸ್ ಏನ್ ಅಂತಾ ತಿಳಿಬೇಕಾದ್ರೆ, ಬಾಹುಬಲಿ - ಭಾಗ ಎರಡನ್ನ ನೋಡ್ಬೇಕು!!!