Wednesday, August 19, 2015

ಕನ್ನಡದ #ಉಪ್ಪಿ-2 ಮತ್ತದರ ಡಬ್ಬಿಂಗ್ ವರ್ಷನ್ ತೆಲುಗಿನ #ಉಪೇಂದ್ರ-2 (#ఉపేంద్ర-2) - ನಾವ್ ನೋಡಿ ಅರ್ಥ ಮಾಡಿಕೊಂಡ ರೀತಿಯಲ್ಲಿ

ಕನ್ನಡದ #ಉಪ್ಪಿ-2 ಮತ್ತದರ ಡಬ್ಬಿಂಗ್ ವರ್ಷನ್ ತೆಲುಗಿನ  #ಉಪೇಂದ್ರ-2 (#ఉపేంద్ర-2) - ನಾವ್ ನೋಡಿ ಅರ್ಥ ಮಾಡಿಕೊಂಡ ರೀತಿಯಲ್ಲಿ ಮತ್ತೇ ನನ್ನ ಫೇಸ್ಬುಕ್ಕ್ ಮಿತ್ರ @Gopi Prabhu ವಿನ ಅರ್ಥೈಸುವಿಕೆಯೂ ಇದೇ.
***************************************************
.
.
ವರ್ತಮಾನದಲ್ಲಿ ಜೀವಿಸುವುದೇ ಆನಂದದ ಸಂಗತಿ. ವರ್ತಮಾನದಲ್ಲಿ ಜೀವಂತವಾಗಿರುವುದೇ ಬದುಕಿನ ಅತ್ಯಂತ ಆನಂದದ ವಿಷಯ ಎಂಬುದು ನಿಮ್ಮ ಆಂತರ್ಯದೊಳಗೆ ಇಳಿಯಬೇಕು. ಬದುಕಿನ ಪ್ರತಿಕ್ಷಣದಲ್ಲೂ ‘ಓಹ್! ನಾನಿನ್ನೂ ಬದುಕಿದ್ದೇನೆ- ಇದೇ

ವಿಶೇಷ!’ ಎನಿಸುವಂತಾದರೆ ನಿಮಗೆ ಮತ್ತೇನು ಬೇಕು?
.
.
ಈ ಸಿನೆಮಾ ಮತ್ತದರ ಕಥೆ ನಿಂತಿರೋದೇ ಭೂತ, ವರ್ತಮಾನ, ಭವಿಷ್ಯತ್ ಕಾಲಗಳ ಬಗೆಗೆ ನಾವ್ ಯೋಚಿಸೋ ರೀತಿಯಲ್ಲಿನ ನೆಲೆಗಟ್ಟಿನ ಮೇಲೇ.

ಭೂತಕಾಲದ #ನಾನು ಎಂಬ ಉಪ್ಪಿ-1 / ಉಪೇಂದ್ರ-1, ವರ್ತಮಾನದ #ನೀನು ಎಂಬ ಉಪೇಂದ್ರ-2 / ಉಪೇಂದ್ರ-2, , ಹಾಗೂ ಭವಿಷ್ಯತ್ ಕಾಲದ #ಅವನು ಅನ್ನೋ ಉಪ್ಪಿ / ಉಪೇಂದ್ರ ಎಂಬ ವ್ಯಕ್ತಿಯ ಬಗೆಗಿನ ಕಥೆಯೇ ಈ ಸಿನೆಮಾದ ಕಥಾವಸ್ತು.
.
.
* ನಾನಿದನ್ನ ಮಾಡೇ ಮಾಡ್ತಿನಿ ಅನ್ನೋ ಸಂಕಲ್ಪಶಕ್ತಿ ಅನ್ನೋದೊಂದಿದ್ದರೆ, ಯಾವುದೇ ವ್ಯಕ್ತಿ ಏನಾದರು ಸಹ ಮಾಡಬಲ್ಲ. ಮನಸ್ಸಿದ್ದರೇ ಮಾರ್ಗ ಅನ್ನೋದನ್ನ ಈ ಸಿನೆಮಾ ಹೇಳುತ್ತೆ.


* ಹಳೇದನ್ನೇ ನೆನುಸ್ಕೊಂತಾ ಕೂರ‍್ಬೇಡಿ,  ಜಾಸ್ತಿ ಯೋಚ್ನೆ ಮಾಡ್ಬೇಡಿ ನಾಳಿನ ಬಗ್ಗೆ;  ಆದರೆ ವಾಸ್ತವದಲ್ಲಿ, ವರ್ತಮಾನದಲ್ಲಿ ಹೇಗಿದಿರೋ ಹಾಗೇ ಏನನ್ನೂ ಜಾಸ್ತಿ ಯೋಚಿಸದೇ, ತಲೆಗಚ್ಚಿಕೊಳ್ಳದೇ ಬದುಕಿ ಅನ್ನುತ್ತೆ ಈ ಸಿನೆಮಾ.


*ದುಡ್ಡಿದ್ರೆ (#ಲಕ್ಷ್ಮಿ) ಮಾತ್ರ #ಖುಷಿ ಅನ್ನೋದು ನಮ್ಮಲ್ಲಿನ ಬಹುತೇಕರ ನಂಬಿಕೆ ಮತ್ತು ವಾದ ಕೂಡ. ಆದ್ರೆ ಯಾರೂ ಸಹ, ಖುಷಿಯಿದ್ದರೇ ಲಕ್ಷ್ಮಿಯೂ (ದುಡ್ಡು) ಸಹ ಬರ‍್ತಾಳೆ ಅನ್ನೋದನ್ನ ನಂಬೋದೇ ಇಲ್ಲಾ
.
.
ಈ ಸಿನೆಮಾದಲ್ಲಿ #ನಾನು ಎನ್ನುವವ ಹಳೆಯ, ಭೂತಕಾಲದ ಉಪೇಂದ್ರ; #ಅವನು ಅನ್ನೋನು ಭವಿಷ್ಯತ್ ಕಾಲದ ಬೇಹುಗಾರಿಕೆ ನಡೆಸುವ ಪೊಲೀಸ್ ಅಧಿಕಾರಿ; ಮತ್ತು, #ನೀನು ಎಂಬುವವನು ಇಂದಿನ ವಾಸ್ತವದಲ್ಲಿ ಬದುಕುವ , ಸದಾ ಹಸನ್ಮುಖಿಯಾಗಿ ತನ್ನ

ಕುಟುಂಬದವರೊಂದಿಗೆ ಬದುಕುವ ಉಪೇಂದ್ರ.
.
.
.
ತನಗೇನ್ ಬೇಕೋ ಅದನ್ನೆಲ್ಲಾ, ಏನ್ ಮಾಡಿಯಾದ್ರೂ ಸರಿ ದಕ್ಕಿಸಿಕೊಳ್ಳೋನು ಹಳೇ ಉಪೇಂದ್ರ-1. ಆ ಹಳೇ "ನಾನು" ಎಂಬುವವನ ಬಗ್ಗೆ ಒಬ್ಬ ವಿಲನ್ ಯಾವಾಗ್ಲೂ ಯೋಚ್ನೆ ಮಾಡ್ತಾ ಇರ‍್ತಾನೆ, ವಾಸ್ತವದಲ್ಲಿ ಆ "ನಾನು" ಇರೋದೇ ಇಲ್ಲಾ, ಆತನದು

ಮುಗಿದೋದ ಕಥೆ, ಆದ್ರೆ, ವಿಲನ್ ಪ್ರಕಾರ ಆತ ಇನ್ನೂ ಇದಾನೆ ಅನ್ನೋ ಕಾಲ್ಪನಿಕ ನಂಬಿಕೆ (ಸಿನೆಮಾದ ದೃಷ್ಯವೊಂದರಲ್ಲಿ, ಆ ವಿಲನ್ ಕೇವಲ "ನಾನು" ಬಗ್ಗೆ ಕನವರಿಸ್ತಾ ಇರ‍್ತಾನೆ, ಆತ ತನಗೆ ಎಂಗೆಲ್ಲಾ ಹೊಡೆದ ಅಂತಾ. ಇದೇ ವಿಲನ್ನಿಗೆ ಉಪೇಂದ್ರ-1

ಸಿನೆಮಾದಲ್ಲಿ "ನಾನು" ಎಕ್ಕಾ ಮಕ್ಕಾ ಚಚ್ಚಿರ‍್ತಾನೆ)
.
.
#ಅವನು ಅನ್ನೋನು ಭವಿಷ್ಯತ್ ಕಾಲದ ಉಪೇಂದ್ರ ಮತ್ತು ಆತ ಬೇಹುಗಾರಿಕೆ ನಡೆಸುವ ಪೊಲೀಸ್ ಅಧಿಕಾರಿ. ಭಾರತಕ್ಕೆ ಬಾರದೇ, ದುಬೈನಲ್ಲಿ ಕುಳಿತು ಭೂಗತ ಜಗತ್ತನ್ನ ನಿಯಂತ್ರಿಸೋ ಸಲೀಂ ಅನ್ನೋ ವಿಲನ್ನಿಗೆ ಮಾತ್ರ ಈ ಉಪೇಂದ್ರ ಅಂದ್ರೆ "ಅವನು".

ಹಾಗಾಗಿ, ಈ ಸಲೀಂ ಯಾವತ್ತೂ ಸಹ, ನೆನ್ನೆ ಇರದಿದ್ದ, ಇಂದೂ ಸಹ ಇರದ, ನಾಳೆ ಇರಬೋದಾದ ಕಾಲ್ಪನಿಕ ವ್ಯಕ್ತಿಯ ಬಗ್ಗೇ ಚಿಂತೆ ಮಾಡ್ತಾ ಇರ‍್ತಾನೆ.
.
.
ಮತ್ತೇ ಕೊನೆಯವನಾಗಿ ಕಥಾನಾಯಕನಾದ #ನೀನು ಎನ್ನುವ ಉಪೇಂದ್ರ. ಈತ ಮಾತ್ರ ಯೋಚ್ನೆ ಮಾಡದೇ ಇಲ್ಲಾ, ಮತ್ತೀತ ವಾಸ್ತವದಲ್ಲಿ, ಸದ್ಯಕ್ಕೆ ಮಾತ್ರ ಬದ್ಕಿರ‍್ತಾನೆ.


ಆಗರ್ಭ ಶ್ರೀಮಂತನನೊಬ್ಬನ ವಿಧವಾ ಹೆಂಡತಿಯಾದ #ಮಂದಾಕಿನಿ ಮಾತ್ರ ಈ ಉಪೇಂದ್ರನನ್ನ "ನೀನು" ಅಂತಲೇ ಅಂದ್ಕೊಂಡಿರ‍್ತಾಳೆ. ಆದರೆ, ಆಕೆಯ ಮಗಳಾದ ಲಕ್ಷ್ಮಿಗೆ / ಖುಷಿಗೆ ಮಾತ್ರ ಈ "ನೀನು", "ನಾನು", "ಅವನು" ಅನ್ನೋ ಮೂವರು ಉಪೇಂದ್ರದ

ಬಗ್ಗೆ ಕನ್ಪ್ಯೂಷನ್ನ್ ಆಗಿ, ಈ ಮೂವರಲ್ಲಿ ನಿಜ ಉಪೇಂದ್ರ ಯಾರೂ ಅಂತಾ ಮಾತ್ರ ಕನ್ಪ್ಯೂಷನ್ನ್ ಇರುತ್ತೆ.
.
.
"ನೀನು" ಅನ್ನೋ ಉಪೇಂದ್ರನನ್ನ ಹೊರತುಪಡಿಸಿ,  ಈ ಸಿನೆಮಾದ ಉಳಿದ ಎಲ್ಲಾ ಪಾತ್ರಗಳಿಗೂ ಲಕ್ಷ್ಮಿ ಮತ್ತು ಖುಷಿ ಅನ್ನೋರು, ಇಬ್ಬರು ಬೇರೆ ಬೇರೆ ವ್ಯಕ್ತಿಗಳಾಗಿ ಕಾಣಿಸ್ತಾರೆ. ಆದ್ರೆ "ನೀನುಗೆ" ಮಾತ್ರ ಲಕ್ಷ್ಮಿಯೂ, ಖುಷಿಯೂ ಒಂದೇ ವ್ಯಕ್ತಿ.
ಇಲ್ಲಿನ ಪ್ರತೀ ಕ್ಯಾರೆಕ್ಟರ್‍ರಿಗೆ ಲಕ್ಷ್ಮಿ ಅನ್ನೋ ವ್ಯಕ್ತಿ ಬಗ್ಗೆ ಗೊತ್ತಿರುತ್ತೆ, ಆದ್ರೆ ಅವ್ರಿಗೆಲ್ಲಾ ಈ ಲಕ್ಷ್ಮಿಯ ಮೂಲಕ, ಮಂದಾಕಿನಯ ಮಗಳಾದ ಖುಷಿಯನ್ನ ಪಡೆಯಬೇಕೆಂಬ ಹಂಬಲ, ಯಾಕೆಂದರೇ ಆಕೆಯ ಆಗರ್ಭ ಶ್ರೀಮಂತೆ ಮಂದಾಕಿನಿಯ ಮಗಳು ಅನ್ನೋ

ಕಾರಣಕ್ಕೆ.

ಆದ್ರೆ "ನೀನು" ಎಂಬ ಉಪ್ಪಿ ಮಾತ್ರ ತನ್ನ ಲಕ್ಷ್ಮಿಯಲ್ಲೇ ಖುಷಿಯನ್ನ ಕಂಡುಕೊಂಡವಂ. ಅದೇನೆಂದರೆ ಆತನ ವಿಲ್ ಅರ್ಥಾತ್ ಸಂಕಲ್ಪ ಶಕ್ತಿ, ಮನಸ್ಸು. ಆದ್ರೆ, ಉಳಿದೆಲ್ಲಾ ಪಾತ್ರವರ್ಗಗಳು ವಿಲ್ ಅಂದ್ರೆ, ಅದು ಮಂದಾಕಿನಿ ಬರೆದಿಟ್ಟ ಉಯಿಲು ಪತ್ರ

ಅಂದ್ಕೊಂಡಿರ‍್ತಾರೆ.
.
.
ಈ ಸಿನೆಮಾ ನೋಡೋ ಬಹುತೇಕರಿಗೆ ಕನ್ಪ್ಯೂಷನ್ ಆಗೊದ್ ಮಾತ್ರ ಗ್ಯಾರೆಂಟಿ, ಕೆಲವರಿಗೆ ಹೆಚ್ಚು ಕನ್ಪ್ಯೂಷನ್, ಮತ್ತ್ ಕೆಲವರಿಗೆ ಕಡಿಮೆ ಕನ್ಪ್ಯೂಷನ್, ಬೆರಳೆಕೆಯಷ್ಟು ಜನರಿಗೆ ನೋ ಕನ್ಪ್ಯೂಷನ್, ಸುಮಾರ್ ಜನಕ್ಕ್ ತಲೆಬುಡವಿಲ್ಲದ, ಲಾಜಿಕ್‍ಲೆಸ್ಸ್, ಲಿಂಕ್

ಲೆಸ್ಸ್ ಸಿನೆಮಾ ಅನ್ಸುತ್ತೆ. ಯಾಕಂದ್ರೇ ಲೋಕೋಭಿನ್ನ ರುಚಿ (ಉಪ್ಪು) ಅಲ್ವಾ, ಹಾಗಾಗಿ.

ಈ ಸಿನೆಮಾದಲ್ಲಿ ಭೂತ ಮತ್ತು ಭವಿಷ್ಯತ್ತ್, ಈ ಎರಡೂ ಕಡೆ ಬರೋ ಪಾತ್ರಗಳು ಮಾತ್ರ ಆಯುಧಗಳ ಸಹಾಯದಿಂದ, ದರ್ಪದಿಂದ, ರೌಡಿಸಂನಿಂದ, ಮಂದಾಕಿನಿಯ ಮಗಳಾದ ಖುಷಿಯನ್ನ ಪಡಿಯಕ್ಕೆ ಪ್ರಯತ್ನ ಮಾಡಿರ‍್ತಾರೆ ಮತ್ತಂತಾ ಪ್ರಯತ್ನದಲ್ಲಿ ಅವರು

ನಂಬಿಕೆಯನ್ನೂ ಮಡಿಕ್ಕಂಡಿರ‍್ತಾರೆ.
.
.
ನಿರ್ದೇಶಕನಾಗಿ ಉಪ್ಪಿ ಈ ಸಿನೆಮಾದಲ್ಲಿ ಏನ್ ಹೇಳಕ್ಕ್ ಹೊಂಟಿದಾನಪ್ಪಾ ಅಂದ್ರೆ, "ಈ ಖುಷಿ, ಸಂತೋಷಗಳನ್ನ, ನಾವು ಕೇವಲ ಹಳೇದನ್ನ ನೆನುಸ್ಕೊಂಡು, ನಾಳಿನದರ ಬಗ್ಗೇ ಸುಖಾಸುಮ್ಮನೇ ಚಿಂತೆ ಮಾಡ್ಕಂದ್ ಪಡಿಯಕ್ಕಾಗಲ್ಲಾ" ಅಂತಾ.

ಹಳೇ ಉಪೇಂದ್ರ-1 ಸಿನೆಮಾದ ವಿಲನ್ನ್ ಯಾವತ್ತೂ ಸಹ ಇಲ್ಲದ ಆ "ನಾನು" ಎಂಬುವವನ ಬಗ್ಗೇನೇ ಚಿಂತೆ ಮಾಡ್ತಾ, ಅವನೊಂದಿಗೆ ಹೊಡೆದಾಡ್ತಾ ಇರ‍್ತಾನೆ.
ಇನ್ನು ದುಬೈನಲ್ಲಿರೋ ಭೂಗತ ಲೋಕದ ನಾಯಕ ಕಮ್ಮ್ ವಿಲ್ಲನ್, ಇಲ್ಲಿನ ಸಿಐಡಿ ಮತ್ತು ಪೊಲೀಸರು ಮಾತ್ರ,  ಇಲ್ಲದ #ಅವನು ಅನ್ನೋ ಭವಿಷ್ಯತ್ತಿನ ಕಾಲ್ಪನಿಕ ಉಪೇಂದ್ರನ ಬಗ್ಗೇ ಯೋಚೆನೆ ಮಾಡ್ತಾ, ಅವನೊಂದಿಗೆ ಹೊಡೆದಾಡ್ತಾ ಇರ‍್ತಾರೆ.
.
.
ಈ ಎಲ್ಲಾ ಗಲಾಟೆಗಳು, ಹೊಡೆದಾಟಗಳು ನಡಿಯದಾದ್ರೂ ಯಾಕೇ ಈ  ಉಪೇಂದ್ರ - 2 ಸಿನೆಮಾದಲ್ಲಿ.  ಅಂತಾ ನೋಡಕ್ಕ್ ಹೊಂಟ್ರೆ ,  ಈ ಎಲ್ಲಾ ಹೊದೆದಾಟಗಳಿಗೆ ಕಾರಣ "ಅವ್ರಿಗೆಲ್ಲಾ ಖುಷಿ ಬೇಕು, ಐ ಮೀನ್ ಖುಷಿ ಅನ್ನೋ ಹುಡುಗಿ". ಅಂಗಾದ್ರೆ, ಆ ಖುಷಿ

ಯಾಕ್ ಬೇಕು?, ಐ ಮೀನ್ ಖುಷಿ ಅನ್ನೋ ಹುಡುಗಿ ಯಾಕ್ ಬೇಕು? ಅವ್ರಿಗೆಲ್ಲಾ ಅಂದ್ರೆ, ಅದರಿಂದ / ಅವಳಿಂದ ಅವರೆಲ್ಲರ ಜೀವನ ಶೈಲಿಯೇ ಬದಲಾಗುತ್ತೆ ಅಂತಾ. ಯಾಕಂದ್ರೇ, ಆಕೆ ಆಗರ್ಭ ಶ್ರೀಮಂತೆ ಮಂದಾಕಿನಿಯ ಮಗಳು ಅನ್ನೋದು ಎಲ್ಲರ ನಂಬಿಕೆ.
.
.
ಒಂದೇ ಒಂದು ಹೊಡೆದಾಟವನ್ನ ಹೊರತು ಪಡಿಸಿ,  ಈ ಸಿನೆಮಾದಲ್ಲಿ ನಡಿಯೋ ಎಲ್ಲಾ ಹೊಡೆದಾಟಗಳು ವಾಸ್ತವದ್ದವಲ್ಲಾ. ಬದಲಿಗೆ ಆಯಾ ಪಾತ್ರಗಳು ತಮ್ಮ ತಮ್ಮಲ್ಲಿ ಕಲ್ಪಿಸಿಕೊಳ್ಳೋ ಭೂತಕಾಲದ "ನಾನು" ಮತ್ತು ಭವಿಷ್ಯತ್ತ್ ಕಾಲದ "ಅವನು" ಅನ್ನೋ

ಉಪೇಂದ್ರನೊಂದಿಗೆ ನಡೆಸೋ ಹೊಡೆದಾಟಗಳಷ್ಟೇ.
.
.
ಸಿನೆಮಾದ ಮೊದಲಿಗೆ ಒಂದ್ ವಿಲ್ಲ್ (Will) ಬಗ್ಗೆ ತೋರುಸ್ತಾರೆ, ಸಿನೆಮಾದ ಕೊನೆಯೂ ಸಹ ಅದೇ. ಆ ವಿಲ್ಲಲ್ಲಿರೋ ಖುಷಿನಾ ಖಳನಾಯಕರು ಒಂದು ಹುಡುಗಿ ಅಂತಾ ಹುಡಿಕಿದರೆ, ನಾಯಕ ಅದನ್ನ ಖುಷಿ ಅಂತಾ ಲಕ್ಷ್ಮಿಯಲ್ಲಿ ಹುಡುಕ್ತಾನೆ. ಮತ್ತು ವಿಲ್ಲ್

ಅನ್ನೋದನ್ನ ಖಳನಾಯಕರು ಉಯಿಲು ಅಂದ್ಕಂಡ್ರೆ, ನಾಯಕ ಮಾತ್ರ ಅದನ್ನ ಲಕ್ಷ್ಮಿಯ ಖುಷಿಗಾಗಿ ಇರೋ ಸಂಕಲ್ಪಶಕ್ತಿ ಇದು ಅಂದ್ಕೋತಾನೆ.

ನಾವೆಲ್ಲಾ ಈ ಸಿನೆಮಾದ ಖಳನಾಯಕರ ತರ: ಸಿನೆಮಾ ನೋಡೋದ್ರಿಂದ, ಏನ್ ಸಿನ್ಮಾ ಸಿವಾ ಇದು ಅಂದ್ಕೋತೀವಿ.

ಮಂದಾಕಿನಿ ಬರೆದಿರೋ ಆ ವಿಲ್ಲ್ ಏನ್ ಹೇಳುತ್ತಪ್ಪಾ ಅಂದ್ರೆ " ತನ್ನ ಮಗಳಾದ ಖುಷಿಯನ್ನ ಯಾರ್ ಮದ್ವೆ ಆಗ್ತಾರೋ, ಅವ್ರಿಗೆ ಆಕೆಯ ಎಲ್ಲಾ ಆಸ್ತಿ ಸೇರುತ್ತೆ" ಅಂತಾ. ಆ ಮಂದಾಕಿನಿ ಕೇವಲ ಸುಳಿವನ್ನ ನೀಡಿರ‍್ತಾಳೋ ಹೊರತು, ಯೋಚ್ನೆ ಮಾಡಿ

ಅಂತೇಳಿರಲ್ಲಾ ಆ ವಿಲ್ಲಿನಲ್ಲಿ.
.
.
ಈ ಸಿನೆಮಾದ ಎಲ್ಲಾ ಪಾತ್ರಗಳೂ ಬರೀ ಯೋಚ್ನೆ ಮಾಡ್ತಾನೇ ಇರ‍್ತವೇ, ಅಂಗಾಗಿ ಅವರ‍್ಯಾರಿಗೂ ಆ ಖುಷಿ ಸಿಗೋದೇ ಇಲ್ಲಾ. ಆದರೆ ನಾಯಕನಾದ "ನೀನು" ಎಂಬ ಉಪೇಂದ್ರ ಮಾತ್ರ, ಆ ಮಂದಾಕಿನಿ ಬರೆದಿರೋ ಆ ವಿಲ್ಲನ್ನ ಸರಿಯಾಗಿ ಅರ್ಥೈಸಿಕೊಂಡು, ಆ

ಪ್ರಕಾರವೇ ನಡಿತಾನೆ, ಹಾಗಾಗಿ ಅವನಿಗೆ ಸರಿಯಾದ ದಾರಿ ತಿಳಿಯುತ್ತೆ. ನೀನು ಹತ್ತಿರ ಖುಷಿ ಇದ್ದಿಂದ್ರಂದಲೇ, ಲಕ್ಷ್ಮಿ ಅವನತ್ರ ಬರ‍್ತಾಳೆ.
.
.
ಇದರ ಬಗ್ಗೆ ಇನ್ನೂ ವಿವರವಾಗಿ ತಿಳಿಯಕ್ಕೆ, ಕೆಲ ಸನ್ನಿವೇಶಗಳನ್ನ ತಗಳಣ;
"ನೀನುವಿನ" ತಂಗಿಯನ್ನ ಯಾರೋ ಒಬ್ಬ ಕಿಡಿಗೇಡಿ ಕಾಲೇಜಿನಲ್ಲಿ ಚುಡಾಯಿಸ್ತಾ ಇರ‍್ತಾನೆ, ಆಕೆಗೆ ಕಾಟ ಕೊಡ್ತಾ ಇರ‍್ತಾನೆ ಅಂತಾ, ಆಕೆ ತನ್ನ ಅಣ್ಣನಾದ "ನೀನುವಿನ" ಹತ್ತಿರ ಹೇಳಿದಾಗ, ಆಗ "ನೀನು" ಆಕೆಗೆ "ಆ ಕಿಡಿಗೇಡಿಯ ಬಗ್ಗೆ ನೀ ಯೋಚಿಸಲೇ ಬೇಡ,

ಸುಮ್ನಿರು" ಅಂದಾಗ ಆಕೇ ಹಾಗೇ ಮಾಡ್ತಾಳೆ. ಮರುದಿನ, ಯಾರೋ ಆ ಕಿಡಿಗೇಡಿಯನ್ನ ಕೊಂದಾಕ್ತಾರೆ.

ಹಾಗಿದ್ರೇ, ಆತನನ್ನ ಕೊಂದಿದ್ಯಾರು?

ಆತನನ್ನ ಕೊಂದಿದ್ದು ಮಂದಾಕಿನಿಯ ಕಡೆಯ ರೌಡಿಗಳು, ಯಾಕಂದ್ರೆ, "ನೀನು", ಆ ಮಂದಾಕಿನಿಯ ವಿಲ್ಲನ್ನ ಫಾಲೋ ಮಾಡ್ತಾ ಇರ‍್ತಾನೆ, ಅದು ಮಂದಾಕಿನಿ "ನೀನುವಿಗೆ" ಮಾಡೋ ಸಹಾಯ.

ಇನ್ನೊಂದು ಸನ್ನಿವೇಶ;
ನಾಯಕನಾದ "ನೀನುವನ್ನ", ಪೊಲೀಸರು ಒಂದ್ಸಲ ಬಂಧಿಸಕ್ಕ್ ಬಂದಾಗ, ಅವರಿಗೆ ಎಲ್ಲಿಂದಲೋ, ಯಾರಿಂದಲೋ ಒಂದ್ ಪೋನ್ ಕರೆ ಬರುತ್ತೆ, ಆ ಕರೆಯಲ್ಲಿ ಈ "ನೀನುವನ್ನ" ಬಂಧಿಸಬೇಡಿ ಅಂತಾ ಆಙ್ಞೆ ಬರುತ್ತೆ. ಆ ಕರೆ ಮಾಡೋದು ಬೇರಾರೂ ಅಲ್ಲಾ,

ಬದಲಿಗೆ ಮಂದಾಕಿನೆಯೇ, ಯಾಕಂದ್ರೇ ಆಕೆಯ ವಿಲ್ಲ್ ಪ್ರಕಾರ ನಡಿತಾ ಇರೋನು ಈ "ನೀನು" ಮಾತ್ರ.

ಈ ಸಿನೆಮಾದಲ್ಲಿ "ನೀನು" ಎಂಬ ವ್ಯಕ್ತಿ ಮಾತ್ರ ವಾಸ್ತವ ಹಾಗೂ ಸತ್ಯ, ಉಳಿಕೆ "ನಾನು" ಮತ್ತು "ಅವನು" ಅವಾಸ್ತವಿಕ ಅಥವಾ ಕಾಲ್ಪನಿಕ ಭೂತಕಾಲದ, ಭವಿಷ್ಯತ್ ಕಾಲದ ಪಾತ್ರಗಳು, ಬೇರೆ ಬೇರೇ ವ್ಯಕ್ತಿಗಳ ಕಲ್ಪನೆಯಲ್ಲಿ ಮಾತ್ರ.
ಆ "ನೀನು" ಎಂಬುವವ ವರ್ತಮಾನದಲ್ಲಿ ಮಾತ್ರ ಬದುಕುವವ, ಹಾಗಾಗಿ ಸಿನೆಮಾದ ಕೊನೆಯಲ್ಲಿ ಆತ ಲಕ್ಷ್ಮಿಯೊಂದಿಗೆ ಮಾತಾಡ್ತಾ ಇರ‍್ತಾನೆ, ಇಬ್ರೂ ಖುಷಿ ಖುಷಿಯಾಗಿ.
.
.
ಸಿನೆಮಾದ ಕೊನೆಯಲ್ಲಿ "ನೀನು" ಎನ್ನುವ ಕಥಾನಾಯಕ ಉಪೇಂದ್ರ, "ನಾನು" ಮತ್ತು "ಅವನು" ಕೇವಲ ಕಾಲ್ಪನಿಕ ಪಾತ್ರಗಳು ಮತ್ತವು ನಿಜವಲ್ಲ ಅಂತಾ ನಾಯಕಿ ಲಕ್ಷ್ಮಿ / ಖುಷಿಗೆ ಹೇಳ್ತಾನೆ.
.
.
ನನ್ನ ಹಳೆಯದರ ಬಗ್ಗೆ ನೀವ್ ಯೋಚಿಸಿಕೊಂಡು, ಅದನ್ನೇ ಕಲ್ಪಿಸಿಕೊಂಡರೆ, ನನ್ನಲ್ಲಿ ನೀವು ’ನಾನು’ವನ್ನ ಕಾಣ್ತೀರಾ!

ನನ್ನ ಭವಿಷ್ಯದ ಬಗ್ಗೆ ನೀವ್ ಯೋಚಿಸಿಕೊಂಡು, ಅದನ್ನೇ ಕಲ್ಪಿಸಿಕೊಂಡರೆ,  ನನ್ನಲ್ಲಿ ನೀವು ’ಅವನನ್ನು’ ಕಾಣ್ತೀರಾ!

ನನ್ನ ವಾಸ್ತವದ ನೈಜತೆಯನ್ನ ಅನುಭವಿಸುವವರಿಗೆ ಮಾತ್ರ, ನನ್ನಲ್ಲಿ ನೀವು "ನೀನುವನ್ನ" ಕಾಣ್ತಿರಾ!


ಈ ಸಿನೆಮಾದಲ್ಲಿ ಭಗವದ್ಗೀತೆಯ ಒಂದು ಎಳೆಯನ್ನಿಟ್ಟುಕೊಂಡು, ಸಂಪೂರ್ಣ ಸಿನೆಮಾ ಮಾಡಲಾಗಿದೆ, ಹಾಗಾಗಿ ಕೆಲವರಿಗೆ ಅರ್ಥವಾಗುತ್ತೆ ಸಿನೆಮಾ, ಮತ್ತ್ ಕೆಲವರಿಗೆ ಅರ್ಥವಾಗಲ್ಲ
--------------

ವರ್ತಮಾನನ ಬಗ್ಗೆ ಅಲ್ಲಲ್ಲಿ ಎಕ್ಕಿ ತಂದ ಸಾಲುಗಳು ಕೆಳಗಿವೆ, ಓದ್ಕಳಿ
******************************************

ವರ್ತಮಾನ ಮಾತ್ರ ಸತ್ಯ: ಏನು ಮಾಡಿಕೊಂಡಿರುವೆ ನಿನ್ನ ಬದುಕನ್ನು? ಗಮನಿಸು. ಬದುಕು ಎಷ್ಟೊಂದು ಶ್ರೀಮಂತವಾಗಿದೆ. ಆದರೆ ನೀನು ಮಾತ್ರ ಬರಡು ಹೃದಯದಿಂದ ಬದುಕನ್ನು ಎದುರಿಸುತ್ತಿದ್ದಿ
.
.
ವರ್ತಮಾನದಲ್ಲಿ ಬದುಕಿ: ಶಾಂತಿ ಮತ್ತು ಸಂತೋಷ ದಕ್ಕುವುದು ನಾವು ‘ಈಗ’ ಬದುಕಿದಾಗ. ವರ್ತಮಾನವನ್ನು ಹಿಡಿಯುವುದು ಕಷ್ಟ. ಇದನ್ನು ವ್ಯಾಖ್ಯಾನಿಸುವುದು ಇನ್ನೂ ಕಷ್ಟ. ಯಾಕೆಂದರೆ, ಯಾವುದನ್ನು ವರ್ತಮಾನ ಎಂದು ವಿವರಿಸಲು

ಹೊರಡುತ್ತೇವೋ ಆ ವೇಳೆಗಾಗಲೇ ಅದು ಭೂತವಾಗಿರುತ್ತದೆ
.
.
ಭೂತಕ್ಕೆ ಅರ್ಥವಿಲ್ಲ, ಅದು ನಮ್ಮ ಮಿದುಳು ಹಿ೦ದಿನ ವರ್ತಮಾನವನ್ನು, ಈ ವರ್ತಮಾನದಲ್ಲಿ ಓದುವುದಷ್ಟೆ. "Amnesia" ಬ೦ದವರ ಭೂತಕಾಲವು ಮಾಯವಾಗುವುದು ತಿಳಿದಿರಬೇಕಲ್ಲವೆ? ಹಾಗೆಯೆ ಭವಿಷ್ಯ ಎ೦ಬುದು ವರ್ತಮಾನದಲ್ಲಿ ಭೂತಕಾಲದ

ಘಟನಾವಳಿಯನ್ನು ಆಧಾರವಾಗಿ ಇಟ್ಟುಕೊ೦ಡು ಮಾಡುವ ಒ೦ದು ಊಹೆ."Interpolation made in the present, of past recordings stored in the present". ಆದ್ದರಿ೦ದ ಭವಿಷ್ಯ ಅನಾಮತ್ತಾಗಿ

ಬದಲಾಗಬಹುದು. ಇರುವ ಸತ್ಯವೊ೦ದೆ.ವರ್ತಮಾನ.
.
.
ನಿಮ್ಮಲ್ಲಿ ಮಡುಗಟ್ಟಿದ ನೋವಿಗೆ ವಿದಾಯ ಹೇಳಬೇಕಾದರೆ ನೋವಿನೊಂದಿಗೆ ಬದುಕುವುದನ್ನು ಕಲಿಯಬೇಕು. ಸಂಪೂರ್ಣ ವರ್ತಮಾನದಲ್ಲಿದ್ದಾಗಲೇ ಭೂತದ ಹೊರೆ ಕಳಚುವುದು ಸಾಧ್ಯ.
.
.
ಕಾಲದ ಸೀಮೆಯಲ್ಲಿ ಭೂತವು ವರ್ತಮಾನದೊಂದಿಗೆ -ವರ್ತಮಾನವು ಭವಿಷ್ಯದೊಂದಿಗೆ ಇರುವುದು ಮಾತ್ರ ತಿಳಿಯುತ್ತದೆ
.
.
ಭೂತಕಾಲದ ವೀಕ್ಷಕ ಇನ್ನಿಲ್ಲವಾದಾಗ ವಾಸ್ತವ ಎಂಬ ಕೇವಲ ಜ್ಞಾನ ಸಾಕಾರವಾಗುತ್ತದೆ. ವರ್ತಮಾನದಲ್ಲಿ ತೊಡಗಿಕೊಂಡ 'ಏನಿರುತ್ತದೋ ಅದ'ಕ್ಕೆ ವೀಕ್ಷಕನಂತೆ ಕಾಲದ ಸಂಕೋಲೆಗಳು ಬಂಧಿಸುವುದಿಲ್ಲ. ನಿದ್ದೆಯ ಹೊತ್ತಿನಲ್ಲಿ ಮನಸ್ಸು- ಬುದ್ಧಿ ಮತ್ತು

ದೇಹಗಳು ಒಂದು ಸಮಗ್ರ ವ್ಯವಸ್ಥೆಗೊಳಪಟ್ಟಿರುವಂತೆ, ಜಾಗೃತರಾಗಿದ್ದಾಗಲೂ ಶಬ್ದಗಳಿಲ್ಲದ ಸ್ಥಿತಿ ಮತ್ತು ಕಾಲವಿಲ್ಲದ  ಚಲನೆಯ ಆಯಾಮವನ್ನು ಪಡೆಯುವ ವ್ಯವಸ್ಥೆ ಅದು. ಇದೆಲ್ಲ ರಂಜನೀಯವಾದ ಕನಸಲ್ಲ. ಅಮೂರ್ತರೂಪದ ಪಲಾಯನವೂ ಅಲ್ಲ.

ನಿಜ ಅರ್ಥದಲ್ಲಿ ಧ್ಯಾನ ಎಂಬುದರ ಸಮೀಕರಿಸಿದ ರೂಪ ಇದು. ಅಂದರೆ ಎಚ್ಚರದಲ್ಲಿ ನಡೆಯುತ್ತಿರಬಹುದು ಅಥವಾ ನಿದ್ದಿಸುತ್ತಿದ್ದಾಗಲೂ ಮೆದುಳು ಎಚ್ಚರವಾಗಿರುತ್ತದೆ.
.
.
ಪ್ರಶ್ನಿಸುವುದು, ಅಡಚಣೆ ಮಾಡುವುದು, ಎಚ್ಚರಿಸುವುದು, ತಿಳಿದುಕೊಳ್ಳುವುದೆಲ್ಲ ಸವಾಲಿನೊಂದಿಗೆ ಬರುವ ಸಹಜ ಗುಣ. ಆದರೆ ಸವಾಲು ಎಂಬುದೇ ಭೂತಕಾಲದ ಹಳೆಯ ಸರಕಾದಾಗ ವರ್ತಮಾನಕ್ಕೆ ಜಾಗವಿರುವುದಿಲ್ಲ. ಅನುಭವ ಜನ್ಯ ತೀರ್ಮಾನಗಳು

ಪರಿಶೀಲಿಸುವ ಗುಣಕ್ಕೆ ಮಂಕು ಹಿಡಿಸುತ್ತವೆ.  ಪರಿಶೀಲನೆಯ ಸಾಧ್ಯತೆಗಳನ್ನು ಸೀಮಿತಗೊಳಿಸುತ್ತವೆ.
.
.
ಭೂತವನ್ನು ವರ್ತಮಾನದಲ್ಲಿ ಬದಲಿಸಿ ಭವಿಷ್ಯವನ್ನು ಹೆಣೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ- ಅದುವೇ ಕಾಲ.


Tuesday, July 14, 2015

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ

#ಬಾಹುಬಲಿ ಅಲಿಯಾಸ್ #ಕಟ್ಟಪ್ಪ - ನಾ ನೋಡಿದ ಸಿನೆಮಾ, ನಾ ನೋಡಿದ ರೀತಿಯಲ್ಲಿ
*****************************************************
 ಮಹಾಭಾರತದ ಎರಡು ಪ್ರಮುಖ ಪಾತ್ರಗಳು. #ಧೃತರಾಷ್ಟ, #ಪಾಂಡು.
.
.
ಧೃತರಾಷ್ಟನ ಅತಿಯಾದ ಪುತ್ರಪ್ರೇಮ, ಪಾಂಡುವಿನ ಮಕ್ಕಳಿಂದ ಸಾಮ್ರಾಜ್ಯವನ್ನ ಮೋಸದಿಂದ ಕಿತ್ಕೊಳ್ಳೋ ತರ ಮಾಡ್ತು. ತಾನು ಕುರುಡ ಎನ್ನುವ ಕಾರಣಕ್ಕೆ, ನಂಗೇ ರಾಜ್ಯಾಧಿಕಾರ ಸಿಗಲಿಲ್ಲಾ, ಅಂಗಾಗಿ, ನನ್ನ ಮಗನಿಗಾದರೂ ಸಿಗಲಿ ಅನ್ನೋದು ಧೃತರಾಷ್ಟನ ವಾದ. ಆದ್ರೆ, ರಾಜನಾಗೋಕ್ಕೇ ಬೇಕಾದ ಗುಣಗಳು ಧುರ್ಯೋಧನನಲ್ಲಿ ಇಲ್ಲಾ ಅನ್ನೋದು ಹಿರಿಯರ, ಜನರ ಅಭಿಮತ.


ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ ಅನ್ನೋದು ಮಾತಾದ್ರೂ, ಕುಂತಿಯ ಆ ಮಕ್ಕಳು, ಕೆಲ ಕಾಲ ಧರ್ಮದಿಂದ ರಾಜ್ಯವನ್ನ ಆಳಿ, ಆ ರಾಜ್ಯವನ್ನ ಉತ್ತುಗ್ಗಂಕೊಯ್ದರು ಅನ್ನೋದು ಸಹ ಅಷ್ಟೇ ಸತ್ಯ.
.
.
ತೆಲುಗಿನ, #ಬಾಹುಬಲಿ ಚಿತ್ರವನ್ನ ನೋಡಿದಾಗ, ನನಗಂತೂ ಧೃತರಾಷ್ಟನ ಪುತ್ರಪ್ರೇಮ, ಪಾಂಡವರ ಪರಿಪಾಟಲು ನೆನಪಿಗ್ ಬಂತು.
.
.
ಸಿನ್ಮಾ ಶುರುವಾಗ್ತಿದ್ದ ಹಾಗೇ, ರಾಜಮಾತೆ #ಶಿವಗಾಮಿ (ರಮ್ಯಕೃಷ್ಣ) ತನ್ನದೇ ಸಾಮ್ರಾಜ್ಯದ (#ಮಾಹಿಷ್ಮತಿ) ಭಟರಿಂದ ಮಗುವೊಂದನ್ನು (ಮಾಹಿಷ್ಮತಿ ಸಾಮ್ರಾಜ್ಯದ  #ಅಮರೇಂದ್ರಬಾಹುಬಲಿಯ ಮಗ) ರಕ್ಷಿಸಲು, ತಪ್ಪಿಸಿಕೊಂಡು ಬರ‍್ತಾ ಇರ‍್ತಾಳೆ, ತಾನು ಗಾಯಗೊಂಡಿದ್ದರೂ, ವೀರಾವೇಶದಿಂದ ಆ  ಮಗುವನ್ನು ಕಾಪಾಡಿ, ನೀರಲ್ಲಿ ಮುಳುಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದರೂ ಸಹ, ತನ್ನ ಆತ್ಮಶಕ್ತಿಯೋ, ಇಲ್ಲಾ ಬೇರಾವ ಶಕ್ತಿಯ ಕಾರಣದಿಂದಲೋ, ತನ್ನ ಕೈಯಲ್ಲಿ ಆ ಮಗುವನ್ನ ಹಾಗೇ ನೀರಲ್ಲಿ ಹಿಡಿದುಕೊಂಡು,  ಅದನ್ನ ಅಲ್ಲೇ ಜಲಪಾತದ ಕೆಳಗೆ ವಾಸಿಸುವ ಕಾಡ ಜನರ ಹತ್ತಿರಕ್ಕೆ ಸೇರಿಸಿ ತಾನು ನೀರಲ್ಲ್ ಹೊಂಟೋಗ್ತಾಳೆ, ಆ ಮಗು #ಶಿವುಡು (ಪ್ರಭಾಸ್) ಹೆಸರಿನಲ್ಲಿ ಕಾಡುಜನರ ಜೊತೆಯಲ್ಲಿ ಬೆಳೆಯುತ್ತಾನೆ.
.
.
ಶಿವುಡುವಿಗೆ (ಪ್ರಭಾಸ್) ತಾನು ವಾಸಿಸುವ ಜಾಗದ ಪಕ್ಕದಲ್ಲೇ ಇರುವ, ಬೃಹತ್ ಜಲಪಾತದ ಆಚೆ ಏನಿರಬೋದು ಅನ್ನೋ ಕುತೂಹಲ ದಿನೇ ದಿನೇ ಕಾಡ್ತಾ ಇರುತ್ತೆ, ಹಾಗಾಗಿ, ಆ ಜಲಪಾತದ ಆಚೆಗೆ ಹೋಗಲು ಆತ ವಿಫಲ ಪ್ರಯತ್ನಗಳನ್ನ ನಡೆಸ್ತಾ ಇರ‍್ತಾನೆ. ಹಾಗೇ, ಒಂದ್ಸಲ, ಜಲಪಾತದ ಮೇಲಿಂದ ಬಂದಂತಾ ಮುಖವಾಡವೊಂದು ಸಿಕ್ಕಿ ಆ ಮುಖವಾಡದ ಹಿಂದಿನ ಆಕೃತಿ ಯಾವುದು ಅನ್ನೋದನ್ನ ಕಂಡಿಡಿಯಕ್ಕೆ , ಆತ ಜಲಪಾತವನ್ನ ಏರಿ, ಆ ಕಡೆ ಇರೋ #ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಸಾಮ್ರಾಜ್ಯಕ್ಕೆ ತಲುಪಿ ಬಿಡುತ್ತಾನೆ. ಅಲ್ಲಿನ ಜಲಪಾತದ ದೃಶ್ಯ, ಕಾಡಿನ ದೃಶ್ಯ, ನೈಜತೇ ಅನ್ನೋ ತರ ಮೂಡಿ ಬಂದಿವೆ.
.
.
ಅಲ್ಲಿಗೆ ತಲುಪಿದ ಅವನಿಗೆ #ಅವಂತಿಕ (ತಮನ್ನ) ಸಿಗುತ್ತಾಳೆ. ಆಕೆ ಮತ್ತವರ ಕಡೆಯವರು, ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಸೆರೆಯಾಳಾಗಿ ಶಿಕ್ಷೆ ಅನುಭವಿಸುತ್ತಿರುವ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಪತ್ನಿಯಾದ / ರಾಣಿಯಾದ #ದೇವಸೇನಳನ್ನ (ಅನುಷ್ಕಾ), ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಕಪಿಮುಷ್ಟಿಯಿಂದ ಬಿಡಿಸಿ ತರಲು ನಾನಾ ಯೋಜನೆಗಳನ್ನ ಹಾಕಿಕೊಂಡು, ವಿಫಲರಾಗಿರುತ್ತಾರೆ. ಆ ಸಮಯದಲ್ಲೇ, ಈ ಶಿವುಡು (ಪ್ರಭಾಸ್) ಮತ್ತು ಅವಂತಿಕಳ (ತಮನ್ನ) ಮಧ್ಯೆ ಘಟಿಸಿದ ಪ್ರೇಮದಿಂದ, ಅವಂತಿಕಳಿಗೆ (ತಮನ್ನ) ವಹಿಸಿದ್ದ ದೇವಸೇನಳ (ಅನುಷ್ಕಾ) ಬಿಡುಗಡೆಯ ಕಾರ್ಯವನ್ನ,  ಈ ಶಿವುಡು (ಪ್ರಭಾಸ್) ತಾನು ವಹಿಸಿಕೊಂಡು ಮಾಹಿಷ್ಮತಿಯ ಅರಮನೆಗೆ ಹೊರಡುತ್ತಾನೆ.
.
.
ಆಗ ಅಲ್ಲಿ, ಬಲ್ಲಾಳದೇವನ (ರಾಣಾ ದುಗ್ಗಬಾಟಿ) ದೊಡ್ಡ ಪ್ರತಿಮೆಯನ್ನು ಮೇಲೆತ್ತಿ ನಿಲ್ಲಿಸಲು ಜನರು ತುಂಬಾ ಶ್ರಮಪಡುತ್ತಿರುತ್ತಾರೆ, ಮತ್ತದರಲ್ಲಿ ಅವರು ವಿಫಲರಾಗಿ, ಆ ಪ್ರತಿಮೆಗೆ ಕಟ್ಟಿರೋ ಹಗ್ಗವನ್ನ ಬಿಟ್ಟುಬಿಡುತ್ತಾರೆ. ಆಗ, ಸಡನ್ನಾಗಿ ಬಂದ ಈ ಶಿವುಡು (ಪ್ರಭಾಸ್) ಜನರ ಮೇಲೆ  ಬೀಳುತ್ತಿರುವ ಪ್ರತಿಮೆಯನ್ನು, ಅದಕ್ಕೆ ಕಟ್ಟಿರುವ ಹಗ್ಗದಿಂದ ಹಿಡಿದು, ಆ ಜನರಿಗೆ ಸಹಕರಿಸುತ್ತಾನೆ. ಆಗ ಅಲ್ಲಿ ಇವನ ಮುಖ ನೋಡಿದ ಜನರು "ಬಾಹುಬಲಿ, ಬಾಹುಬಲಿ" ಅಂತಾ ಕೂಗ್ತಾ ಇರ‍್ತಾರೆ. ಆದ್ರೆ, ಬಾಹುಬಲಿ ಅಂದ್ರೆ ಯಾರೂ, ಏನೂ, ಎತ್ತಾ ಎಂಬುದರ ಪರಿವೆಯಿಲ್ಲದ ಶಿವುಡು (ಪ್ರಭಾಸ್), ಮಾಹಿಷ್ಮತಿಯ ಯುವರಾಜ (ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಮಗ) ಮತ್ತು ಸೇನಾಪತಿ #ಕಟ್ಟಪ್ಪ (ಸತ್ಯರಾಜ್) ನಿಂದ ತಪ್ಪಿಸಿಕೊಂಡು, ದೇವಸೇನಳನ್ನು (ಅನುಷ್ಕಾ) ಕರೆತರುತ್ತಾನೆ. ಆಗ ನಡೆಯೋ ಕಾಳಗದಲ್ಲಿ ಶಿವುಡು (ಪ್ರಭಾಸ್) ಮಾಹಿಷ್ಮತಿಯ ಯುವರಾಜನ ತಲೆಯನ್ನು ಕಡಿದಾಕುತ್ತಾನೆ. ತದನಂತರ ಕಟ್ಟಪ್ಪ  (ಸತ್ಯರಾಜ್) ಶಿವುಡುವನ್ನು (ಪ್ರಭಾಸ್) ಗುರುತಿಸಿ, ಹಿಂದಿನ ಕಥೆಯನ್ನ ಆತನಿಗೆ ಹೇಳುತ್ತಾನೆ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್), ಶಿವುಡುವಿನ ತಂದೆ ಮತ್ತು ಬಲ್ಲಾಳದೇವ (ರಾಣಾ ದುಗ್ಗಬಾಟಿ) ಇಬ್ಬರೂ ಸಹ ತಮ್ಮ ಶೌರ್ಯ ಸಾಹಸಗಳಿಂದ, #ಕಾಲಕೇಯನೆಂಬ (ಪ್ರಭಾಕರ್) ದೈತ್ಯನೆದುರು ಯುದ್ಧದಲ್ಲಿ ಜಯಿಸಿಸುತ್ತಾರೆ.
.
.
ಆದರೆ, ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) "ನೂರು ಶತ್ರುಗಳನ್ನು ಕೊಂದವನು ವೀರನೆನಿಸಿಕೊಳ್ಳುತ್ತಾನೆ. ಆದರೆ ಒಂದೇ ಒಂದು ಪ್ರಜೆಯ ಜೀವವನ್ನು ಉಳಿಸಿದವನು ರಾಜನೆನಿಸಿಕೊಳ್ಳುತ್ತಾನೆ" ಎಂದೇಳಿ, ಬಲ್ಲಾಳದೇವನನ್ನು (ರಾಣಾ ದುಗ್ಗಬಾಟಿ)  ಸಾಮ್ರಾಜ್ಯದ ಸೇನಾಪತಿಯನ್ನಾಗಿ ಅರಿಸಿ, ಅಮರೇಂದ್ರ ಬಾಹುಬಲಿ (ಪ್ರಭಾಸ್)ಯನ್ನು ಮಾಹಿಷ್ಮತಿ ಸಾಮ್ರಜ್ಯದ ಸಿಂಹಾಸನಕ್ಕೆ ಅಧಿಪತಿಯನ್ನಾಗಿ ಆರಿಸುತ್ತಾಳೆ. ಅದೂ, ಬಲ್ಲಾಳದೇವನು (ರಾಣಾ ದುಗ್ಗಬಾಟಿ) ತನ್ನ ಸ್ವಂತ ಮಗನಾಗಿದ್ದಾಗಿಯೂ ಸಹ.

ಕಾರಣ ಏನೋ ಎತ್ತೋ ಗೊತ್ತಿಲ್ಲಾ, ಆದರೆ, ಅಮರೇಂದ್ರ ಬಾಹುಬಲಿಯ (ಪ್ರಭಾಸ್) ಕೊಲೆಯಾಗಿ, ಆತನ ಮಗುವನ್ನು ಈ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ)  ಕಾಪಾಡುತ್ತಾಳೆ.
.
.
ಈ ಬಾಹುಬಲಿ ಸಿನೆಮಾದ ಮೊದಲ ಭಾಗದ ನಿಜವಾದ ಹೀರೋ ಅಂದ್ರೇ ಅದು ಬಲ್ಲಾಳದೇವನೇ (ರಾಣಾ ದುಗ್ಗಬಾಟಿ) ಸರಿ. ಆ ಪಾತ್ರದ ದರ್ಪ, ಕುತಂತ್ರ, ಅಹಂಕಾರ, ದಮ್ಮು, ವೈಭೋಗ ನಿಜಕ್ಕೂ ದುರ್ಯೋಧನನ್ನ ನೆನಪಿಗೆ ತರುತ್ತೆ. ಅಂತಾ ಧುರ್ಯೋಧನ ಪಾತ್ರದ ವ್ಯಕ್ತಿಗೆ, ಧೃತರಾಷ್ಟ್ರನಂತಾ ಅಪ್ಪಾ ಬಿಜ್ಜಳದೇವ (ನಾಸಿರ್) ಡಿಟ್ಟೋ  ಧೃತರಾಷ್ಟ್ರನ ತರವೇ ಪುತ್ರಪ್ರೇಮಿ!!!
.
.
ಆ ಪಾತ್ರ ಪೋಷಣೆಗೆ, ರಾಣ ಪಟ್ಟಿರುವ ಶ್ರಮ ಸಿನ್ಮಾದಲ್ಲಿ ಎದ್ದು ಕಾಣುತ್ತೆ. ಯುದ್ಧ ಸನ್ನಿವೇಶ, ಅಲ್ಲಿ ಆತನ ಅಬ್ಬರ, ಪರಾಕ್ರಮ, ಆತ ಬಳಸಿರೋ ಆಯುಧಗಳು, ನಿಜಕ್ಕೂ ಸೂಪರ್ರ್! ಇಂತಾ ದುರ್ಯೋಧನಂತಾ ಪಾತ್ರಧಾರಿಗೆ, ಅಲ್ಲಿ ಸಿಕ್ಕಿರೋ ಆಯುಧ ಗದೆ! ಅದೂ, ಗದೆಯ ಹಿಡಿಯೊಳಗೆ ಸರಪಳಿಯನ್ನಾಕಿ, ಆ ಸರಪಳಿಗೆ ಗದೆಯ ಮುಂದಿನ ಭಾಗವನ್ನ ಜೋಡಿಸಿ, ಅದನ್ನ ಬಳಸೋ ಶೈಲಿ ನಿಜಕ್ಕೂ ಅದ್ಭುತ.
.
.
ಬಾಹುಬಲಿ ಸಿನ್ಮಾ, ಐತಿಹಾಸಿಕ ಕಥೆಯುಳ್ಳ ಸಿನೆಮವೂ ಅಲ್ಲಾ ಅಥವಾ ಪೌರಾಣಿಕ ಕಥೆಯುಳ್ಳ ಸಿನೆಮಾವೂ ಅಲ್ಲಾ, ಅದೊಂದು ಕಾಲ್ಪನಿಕ ಕಥೆಯಷ್ಟೇ. ಮತ್ತೆ ಈ ಸಿನೆಮಾಕ್ಕೂ, ನಮ್ಮ್ ಅಣ್ಣೋರ ಮಯೂರ ಸಿನೆಮಾಕ್ಕೂ ಸಹ ಯಾವುದೇ ಸಂಬಂಧ ಇಲ್ಲಾ, ಮೊದಲಿಗೆ ರಾಜಮಾತೆ ಶಿವಗಾಮಿ (ರಮ್ಯಕೃಷ್ಣ) ಮಗುವನ್ನ ರಕ್ಷಿಸುವ ಸೀನೊಂದನ್ನೊರತುಪಡಿಸಿ.
.
.
ಅಮರೇಂದ್ರ ಬಾಹುಬಲಿ (ಪ್ರಭಾಸ್)  ಹಾಗೂ ಬಲ್ಲಾಳದೇವ (ರಾಣಾ ದುಗ್ಗಬಾಟಿ) ಎಂಬ ಎರಡು ಪ್ರಮುಖ ಪಾತ್ರಗಳ ನಡುವೆ ಸಿಂಹಾಸನಕ್ಕಾಗಿ ನಡೆಯುವ ಜಿದ್ದಾಜಿದ್ದಿ , ಮತ್ತದಕ್ಕೆ ಸಂಬಂಧಿತ ಘಟನೆಗಳ ಸಮಗ್ರ ಮಿಶ್ರಣವೇ " ಬಾಹುಬಲಿ" ಯ ಕಥಾವಸ್ತು.
.
.
ಅಷ್ಟು ದೊಡ್ಡ ಶಿವಲಿಂಗವನ್ನ ಒಬ್ಬನೇ ಎತ್ತಿಕೊಂಡು, ಜಲಪಾತದಲ್ಲಿ ನೀರು ಬೀಳುವ ಜಾಗಕ್ಕೆ ಆ ಶಿವಲಿಂಗವನ್ನ ಇಡುವ ಸಾಹಸಿ ಆ ಶಿವುಡು  (ಪ್ರಭಾಸ್),

ನೂರಾರು ಅಡಿ ಎತ್ತರದ ಬಲ್ಲಾಳದೇವನ (ರಾಣಾ ದುಗ್ಗಬಾಟಿ) ಚಿನ್ನದ ಪ್ರತಿಮೆಯನ್ನು, ಹಿಡಿದುಕೊಳ್ಳಲಾಗದೇ, ಅದಕ್ಕೆ ಕಟ್ಟಿದ್ದ ಹಗ್ಗವನ್ನ ಎಲ್ಲರೂ ಬಿಟ್ಟ ನಂತರವೂ ಸಹ, ಒಬ್ಬನೇ ಆ ಹಗ್ಗವನ್ನ ಹಿಡಿದು, ಜನರಮೇಲೆ ಬೀಳುತ್ತಿದ್ದ ಆ ಪ್ರತಿಮೆಯನ್ನ ಹಿಡಿದು ನಿಲ್ಲಿಸುವ ಸಾಹಸಿ ಶಿವುಡು  (ಪ್ರಭಾಸ್),

ಸೈನಿಕರಿಂದ ಸುತ್ತುವರೆದ, ಒಳ್ಳೇ ಕಾವಲುಗಾರರನ್ನೊಂದಿರುವ ಕೋಟೆಯನ್ನು ಸುಲಭವಾಗಿ ಹತ್ತುವ ಸಾಹಸಿ ಶಿವುಡು  (ಪ್ರಭಾಸ್).

ಇವು ನೋಡುಗರಿಗೆ ಅತಿರೇಕವೆನಿಸಿದರೂ, ತೆಲುಗಿನ ಬಹುತೇಕ ಸಿನೆಮಾಗಳಲ್ಲಿ ಇದು ಕಾಮನ್ ವಿಷ್ಯ. ಹಾಗಾಗಿ, ಯಾವುದೇ ಲಾಜಿಕ್ಕು, ಮ್ಯಾಜಿಕ್ಕಿನ ಬಗ್ಗೆ ಯೋಚಿಸದೇ ಇಂತಾ ದೃಶ್ಯಗಳನ್ನ ನೋಡಿದರೆ ಓಕೆ, ಇಲ್ಲಾಂದ್ರೆ ನೀವ್ ಸುಖಾಸುಮ್ಮನೇ ತಲೆ ಕೆಡುಸ್ಕೊಬೇಕಾಯ್ತದೆ ಅಷ್ಟೇ.
.
.
ರಾಜಮಾತೆ ಶಿವಗಾಮಿಯ (ರಮ್ಯಕೃಷ್ಣ) ಗತ್ತು, ಗಮ್ಮತ್ತು ನಿಜಕ್ಕೂ ಸೂಪ್ಪರ್!

ಸೇನಾಪತಿ ಕಟ್ಟಪ್ಪನ (ಸತ್ಯರಾಜ್)  ಆರ್ಭಟ, ಪರಾಕ್ರಮವನ್ನ ನೋಡಿದಾಗ, ಮೊದಲ ಭಾಗದ ಈ ಸಿನೆಮಾಕ್ಕೆ ಬಾಹುಬಲಿ ಎಂಬ ಹೆಸರಿನ ಬದಲಿಗೆ ಕಟ್ಟಪ್ಪ ಅಂತಿಟ್ಟದ್ದರೇ ಇನ್ನೂ ಸೊಗಸಾಗಿರುತ್ತಿತ್ತೇನೋ ಅನ್ಸುತ್ತೆ, ಅಷ್ಟರ ಮಟ್ಟಿಗೆ ಸತ್ಯರಾಜ್ ಪಾತ್ರ ಪೋಷಣೆ ಮಾಡಿದ್ದಾರೆ.


ಕಾಲಕೇಯನ (ಪ್ರಭಾಕರ್)  ಪಾತ್ರಧಾರಿಯ ಭಯಂಕರ ರೂಪ, ಅವರಾಡುವ ಭಾಷೆ, ಆತನ ರುದ್ರಾವತಾರ, ನಿಜಕ್ಕೂ ಅದ್ಭುತ ಅನ್ನುವಷ್ಟರ ಮಟ್ಟಿಗೆ ಮೂಡಿ ಬಂದಿದೆ.


ಪರ್ಷಿಯನ್ ಶಸ್ತ್ರಾಸ್ತ್ರ ಪೂರೈಕೆದಾರ (#ಅಸ್ಲಂಖಾನ್ (ಸುದೀಪ್) ಪಾತ್ರದಲ್ಲಿನ ಸುದೀಪ್, ಒಂದೆರಡು ನಿಮಿಷಕ್ಕೆ ಮಾತ್ರ ಈ ಚಿತ್ರದಲ್ಲಿ ಸೀಮಿತ.


ಇಂಟರ್‌ವೆಲ್ ನಂತರ ನಡಿಯೋ ಯುದ್ಧದ ಸನ್ನಿವೇಶ ಮಾತ್ರ ನಿಜಕ್ಕೂ ಅದ್ಭುತವಾಗಿದೆ.


ಬಾಹುಬಲಿ ಚಿತ್ರಕ್ಕೆ ಸದ್ಯಕ್ಕೆ ಕ್ಲೈಮ್ಯಾಕ್ಸ್ ಇಲ್ಲಾ, ಜಸ್ಟ್ ಇಂಟರ್‌ವೆಲ್. ಸಿನ್ಮಾಸ್ ಕ್ಲೈಮ್ಯಾಕ್ಸ್ ಏನ್ ಅಂತಾ ತಿಳಿಬೇಕಾದ್ರೆ, ಬಾಹುಬಲಿ - ಭಾಗ ಎರಡನ್ನ ನೋಡ್ಬೇಕು!!!








Saturday, May 16, 2015

ಕೇಸರಿ ಪಕ್ಷದ ಜಯಭೇರಿ (16 ಮೇ 2014) - ನರೆಂದ್ರ ಮೋದಿ ಗೆದ್ದು ಒಂದು ವರ್ಷ ಇಂದಿಗೆ


ಈಗ್ಗೇ ಒಂದು ವರ್ಷದ ಕೆಳಗೆ (16 ಮೇ 2014), ಇದೇ ದಿನ ನಾವ್ ಬಹು ಕಾತರದಿಂದ ನಿರೀಕ್ಷಿಸುತ್ತಿದ್ದ ದಿನ, ನಮ್ಮ ಕಲ್ಪನೆಗೂ ಮೀರಿದ ದಿಗ್ವಿಜಯ ಸಾಧಿಸಾಯ್ತು.
.
.
ಮಾರನೇ ದಿನ ಬೆಳಿಗ್ಗೆ, ಪೇಪರ್ ಮಾರೋ ಅಂಗಡಿಗೆ ಹೋದವನೇ, ಆ ಅಂಗಡಿಯಲ್ಲಿದ್ದಾ ಎಲ್ಲಾ ಪೇಪರ್‌ಗಳ ಒಂದೊಂದು ಪ್ರತಿಯನ್ನ ತಂದಿಟ್ಕಂಡ್, ಎಲ್ಲವನ್ನೂ ಓದ್ತಾ ಖುಷಿ ಪಟ್ಟೆ.
.
.
ಆ ಎಲ್ಲಾ ಪತ್ರಿಕೆಗಳನ್ನ ಜೋಪಾನವಾಗಿ ಎತ್ತಿಟ್ಟಿದ್ದೇ ಕೂಡ. ಇವತ್ತ್ ಬೆಳಿಗ್ಗೆ ಆ ವಿಜಯದ ದಿನ ನೆನಪಾಗಿ, ಆ ಪತ್ರಿಕೆಗಳ ಪೋಟೋ ತಗಂಡ್ ಇಲ್ಲಾಕಿದೀನಿ.
.
.
.
ಮತ್ತ್ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತಾಡ್ತಾ ಕಾಲ್ ಎಳಿಯೋ ಅವಶ್ಯಕತೆ ಇಲ್ಲಾ ಇಲ್ಲಿ. ವೋಚ್ಚ್ ಅಲಗ್, ಯೇಚ್ಚ್ ಅಲಗ್.
.
.
ಖುಷಿ ಪಡೋ ವಿಷ್ಯಕ್ಕ್ ಖುಷಿ ಪಡಣ, ಕಾಲ್ ಎಳಿಯೋ ವಿಷ್ಯಕ್ಕ್ ಕಾಲೂ ಮತ್ತ್ "ಕೈ"ಯೂ ಎಳಿಯೋಣ

.