Thursday, May 29, 2014

ಆರ್ಟಿಕಲ್ 370

ಆರ್ಟಿಕಲ್ 370

ಸಂವಿಧಾನದ ಆರ್ಟಿಕಲ್ 370 ನಮ್ಮ ರಾಷ್ಟ್ರ ರಾಜಕೀಯದಲ್ಲಿ ದಶಕಗಳಿಂದ ಕೇಳಿಬರುತ್ತಿರುವ ಪದವಾಗಿದೆ.
ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡುವಂತಹ ಈ ವಿಧಿ ಬಗ್ಗೆ ಬಲಪಂಥೀಯ ಸಂಘಟನೆಗಳು ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುವುದರಿಂದ ಅದಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಅಗತ್ಯವಿಲ್ಲ ಎಂಬುದು ಆರೆಸ್ಸೆಸ್ ಮತ್ತಿತರ ಸಂಘಟನೆಗಳ ಅಭಿಪ್ರಾಯ.

ಅಷ್ಟಕ್ಕೂ ಈ ವಿಧಿ 370 ಎಂದರೇನು..?
1) ಸಂವಿಧಾನದ 370ನೇ ವಿಧಿಯನ್ವಯ ಜಮ್ಮು- ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಲಾಗಿದೆ.
ಅದರಂತೆ, ಭಾರತೀಯ ಸಂವಿಧಾನದ ಎಲ್ಲಾ ವಿಚಾರಗಳು ಇತರ ರಾಜ್ಯಗಳಿಗೆ ಅನ್ವಯವಾದರೂ, ಜಮ್ಮು ಮತ್ತು ಕಾಶ್ಮೀರದ ಮಟ್ಟಿಗೆ ಆಗುವುದಿಲ್ಲ.
ಭಾರತದ ಅವಿಭಾಜ್ಯ ಅಂಗ ಎಂದು ವಿಧಿಯಲ್ಲಿ ಹೇಳಿದ್ದರೂ, ಹಣಕಾಸು, ರಕ್ಷಣೆ, ವಿದೇಶಾಂಗ, ಸಂವಹನ ಹೊರತುಪಡಿಸಿ, ಉಳಿದೆಲ್ಲ ತೀರ್ಮಾನಗಳನ್ನು ಕಾಶ್ಮೀರ ಸರ್ಕಾರ ಸ್ವತಂತ್ರವಾಗಿ ಕೈಗೊಳ್ಳಬಹುದಾಗಿದೆ.

2) ಅಲ್ಲಿನ ಜನತೆ ಭಾರತದ ಬೇರೆ ಕಡೆಗಳಲ್ಲಿ ಆಸ್ತಿ ಖರೀದಿ ಮಾಡಬಹುದಾಗಿದ್ದು, ಬೇರೆ ರಾಜ್ಯದ ಜನರು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ.

3) ಕಾಶ್ಮೀರದಲ್ಲಿ ಯುದ್ಧ ಸಂದರ್ಭದ ತುರ್ತುಸ್ಥಿತಿ ಹೊರತಾಗಿ ತುರ್ತುಪರಿಸ್ಥಿತಿ ಘೋಷಿಸುವ ಯಾವುದೇ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿರುವುದಿಲ್ಲ.

4) ಈ ವಿಧಿಯ ಪ್ರಕಾರ ಕಾಶ್ಮೀರ ರಾಜ್ಯದ ಗಡಿಭಾಗಗಳನ್ನ ಕಡಿಮೆ ಮಾಡುವುದಾಗಲೀ ಹೆಚ್ಚಿಸುವುದಾಗಲೀ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ.

5) 1949ರಲ್ಲಿ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವಂಥ ವಿಧಿಯ ರಚನೆಗೆ ಡಾ| ಅಂಬೇಡ್ಕರ್ ಜೊತೆಗೆ ಸಮಾಲೋಚನೆ ಮಾಡಬೇಕೆಂದು ಕಾಶ್ಮೀರದ ಮುಖಂಡ ಶೇಖ್ ಅಬ್ದುಲ್ಲಾ ಅವರಿಗೆ ನೆಹರೂ ಸೂಚಿಸಿದ್ದರು.

6) ಭಾರತೀಯ ಸಂವಿಧಾನವನ್ನ ರಚಿಸಿದ ಡಾ| ಬಿ.ಆರ್. ಅಂಬೇಡ್ಕರ್ ಈ 370ನೇ ವಿಧಿಯನ್ನ ಡ್ರಾಫ್ಟ್ ಮಾಡಲು ನಿರಾಕರಿಸಿದ್ದರು.

ಅಂದು ಡಾ.ಬಿ.ಆರ್. ಅಂಬೇಡ್ಕರ್, ಶೇಕ್ ಅಬ್ದುಲ್ಲಾನಿಗೆ "ಕಾಶ್ಮೀರಕ್ಕೆ 370 ನೇ ವಿಧಿಯ ವಿಷಯವಾಗಿ" ಹೀಗೆ ಹೇಳಿದ್ದರು! 

"ಭಾರತ ನಿಮ್ಮ ಗಡಿಯನ್ನ ರಕ್ಷಿಸಬೇಕು ಅಂತಾ ಬಯಸ್ತೀರಾ, ಭಾರತ ನಿಮ್ಮ ಪ್ರದೇಶದಲ್ಲಿ ರಸ್ತೆಗಳನ್ನ ಮಾಡ್ಬೇಕು ಅಂತಾ ಬಯಸ್ತೀರಾ, ನಿಮಗೆ ತಿನ್ನಕ್ಕ್ ಬೇಕಿರೋ ಎಲ್ಲವನ್ನು ಭಾರತದಿಂದ ಬಯಸ್ತೀರಾ, ಮತ್ತೆ ಕಾಶ್ಮೀರ ಭಾರತಕ್ಕೆ ಸರಿಸಮನಾದ ಸ್ಥಾನಮಾನ ಬೇಕು ಅಂತಾ ಬಯಸ್ತೀರಾ. 
ಆದರೆ, ಭಾರತಕ್ಕೆ ಮಾತ್ರ ಕಾಶ್ಮೀರದ ಮೇಲೆ ಅಲ್ಪ ಅಧಿಕಾರ ಮತ್ತು ಭಾರತೀಯ ನಾಗರೀಕರಿಗೆ ಮಾತ್ರ ಕಾಶ್ಮೀರದಲ್ಲಿ ಯಾವುದೇ ರೀತಿಯ ಅಧಿಕಾರ ಇರಬಾರದು ಅಂತಾ ಬಯಸ್ತೀರಾ.

ನಿಮ್ಮ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡೋದು ಅಂದರೆ, ಅದು ಭಾರತದ ಸಾರ್ವಭೌಮತೆಗೆ / ಹಿತಕ್ಕೆ ವಿರುದ್ಧವಾದದ್ದು ಹಾಗೂ  ವಿಶ್ವಾಸಘಾತುಕವಾದದ್ದು ಮತ್ತು ಈ ದೇಶದ ಕಾನೂನು ಮಂತ್ರಿಯಾಗಿ ನಾನ್ಯಾವತ್ತು ಅಂತಾ ಕೆಲಸವನ್ನು ಮಾಡಲಾರೆ!"

ನೋಡಿ ನಾಳಿನ ಭವಿಷ್ಯದ ಬಗ್ಗೆ ಅಂದೇ, ಡಾ.ಬಿ.ಆರ್. ಅಂಬೇಡ್ಕರ್ ಯೋಚನೆ ಮಾಡಿದ್ದರು; ಆದರೂ ನೆಹರೂ ಎಂಬ ಧೂರ್ತ ಕಾಶ್ಮೀರಕ್ಕೆ 370 ನೇ ವಿಧಿಗೆ ಒಪ್ಪಿಗೆ ನೀಡೆಬಿಟ್ಟ.


(“You wish India should protect your borders, she should build roads in your area, 
she should supply you foodgrains, and Kashmir should get equal status as India. 
But Government of India should have only limited powers and Indian people should have no rights in Kashmir. 
To give consent to this proposal, would be a treacherous thing against the interests of India and I, as the Law Minister of India, will never do it.”)

7) ಸಂವಿಧಾನದಲ್ಲಿ 370ನೇ ವಿಧಿಯನ್ನ ಕೊನೆಗೂ ರಚಿಸಿದ್ದು ಗೋಪಾಲಸ್ವಾಮಿ ಅಯ್ಯಂಗಾರ್

No comments: