Saturday, December 20, 2014

ಕ್ಯಾ PK ಆಯೇ ಕ್ಯಾ?

ಕ್ಯಾ PK ಆಯೇ ಕ್ಯಾ? (ಅಮೀರ್ ಖಾನ್ ಚಿತ್ರ PK ಬಗ್ಗೆ ನನಗನ್ನಿಸಿದ್ದು, ಚಿತ್ರವನ್ನ ಥಿಯೇಟರ್’ನಲ್ಲಿ ನೋಡಿದ ಮ್ಯಾಗೆ)
-----------------------------------------------------------------------------------------------

ಕಥೆ ಡಿಫರೆಂಟಾಗಿರೋ ಸಿನ್ಮಾ PK, ಆ ಕಥೆನಾ ಸಿನ್ಮಾದಲ್ಲಿ ಹೇಳಿರೋ ರೀತೀ ಕೂಡ ಡಿಫರೆಂಟೇ! ಇದೊಂತರ ಕಾಮಿಡಿ ಮಿಶ್ರಿತ, ಮನಸ್ಸಿಗೆ ಮುದ ನೀಡೋ ಸಿನ್ಮಾ. ಕೊಟ್ಟ ಕಾಸಿಗೆ ಲಾಸಿಲ್ಲದ್ದು. ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಇಬ್ರೂ ಸಹ ಹೀರೋ ಈ ಸಿನೆಮಾಕ್ಕೆ, ಒಬ್ಬ ತೆರೆಯ ಮುಂದೆ, ಮತ್ತೊಬ್ಬ ತೆರೆಯ ಹಿಂದೆ


ನಾವು ಇತ್ತೀಚೆಗೆ ಬೇರೆ ಗ್ರಹಗಳಲ್ಲಿ ಜೀವಿಗಳಿದಾವ ಅಂತಾ ಸಂಶೋಧನೆ ಮ್ಯಾಗ್ ಸಂಶೋಧನೆ ಮಾಡ್ತಾನೆ ಇದೀವಿ. ಹಾಗಾಗಿ, ಚಂದ್ರನ ಮ್ಯಾಗೆ, ಮಂಗಳನ ಮ್ಯಾಗೆ ನಮ್ಮ ಹೆಜ್ಜೆಗುರುತುಗಳನ್ನ ಮೂಡ್ಸಕ್ಕ್ ನೋಡ್ತಾನೇ ಇದೀವಿ. ಅಂಗೇ ಬೇರೇ ಗ್ರಹದಲ್ಲಿರುವ ಜೀವಿಗಳೆನಾದ್ರೂ, ನಮ್ಮ ಭೂಮಿ ಮ್ಯಾಗೂ ಬಂದ್ರೇ? ಹೆಂಗಿದ್ದರಬೋದು ಅನ್ನೋದು ಒನ್‍ಲೈನ್ ಸ್ಟೋರಿ.
.
.
ಬೇರೆ ಗ್ರಹದ, ಮನುಷ್ಯರ ತರಾನೇ ದೇಹಾಕಾರವಿರುವ, ಆದ್ರೆ ನಮ್ಮ ಹಾಗೇ ಮಾತನಾಡದ ಮತ್ತೆ ಬಟ್ಟೆಯೆಂದರೆನೆಂದು ಗೊತ್ತಿಲ್ಲದ ಅನ್ಯಗ್ರಹದ ಜೀವಿಯೊಂದು ರಾಜಸ್ಥಾನದಲ್ಲಿ ತನ್ನ ಹಾರುವ ತಟ್ಟೆಯಿಂದಿಳಿದು ಬಂದು ತನ್ನ ಹಾಗೂ ತನ್ನ ಗ್ರಹಕ್ಕೆ ಕನೆಕ್ಷನ್ ಮಾಡೋ ಲಾಕೆಟ್ಟನ್ನ ಕಳೆದುಕೊಳ್ಳುತ್ತೆ. ಆದು / ಆತ ಲಾಕೆಟ್ ಕಳೆದುಕೊಂಡಾಗ ಆ ಜೀವಿಗೆ ಸಿಗೋದೇ "PKಯ ಮುಂದಿನ ಭಾಗವನ್ನ ಮುಚ್ಚೋ ಟೇಪ್ ರೆಕಾರ್ಡರ್". ಲಾಕೆಟ್ಟಿಲ್ಲದೇ ಆ ಜೀವಿ ತನ್ನ ಗ್ರಹಕ್ಕೆ ಮತ್ತ್ ವಾಪಸ್ ಹೋಗೋಕ್ಕ್ ಆಗಲ್ಲ.
.
.
ಆ ಲಾಕೆಟ್ಟನ್ನ ಹುಡೂಕೋ ಪ್ರಯತ್ನದಲ್ಲಿ ಹೋಗೋ ಆ ಜೀವಿಗೆ ಈ ಭೂಮಿ ಮ್ಯಾಗಿನ ಜನರ ವೇಷ ಭೂಷಣ, ಆಚಾರ ವಿಚಾರಗಳು ವಿಚಿತ್ರ ಅನ್ಸುತ್ವೆ. ನಮ್ಮಲ್ಲಿನ ಕೆಲವರು ನಿನ್ನ್ ಲಾಕೆಟ್ಟನ್ನ ದ್ವ್ಯಾವ್ರು ಮಾತ್ರ ಹುಡ್ಕಕ್ಕ್ ಸಾಧ್ಯ ಅಂದಾಗ, ಈತ ಎಲ್ಲಾ ಧರ್ಮದ ದೇವರುಗಳನ್ನ ಬೇಡ್ಕೊಳ್ತಾನೆ ಮತ್ತ್ ತನ್ನ ಲಕೆಟ್ ಸಿಗದಿದ್ದಾಗ "ದೇವರು ಕಾಣೆಯಾಗಿದ್ದಾನೆ, ಹುಡುಕಿಕೊಡಿ ಅಂತಾ Pamphlet ಮಾಡಿ ಕೂಡ ಹಂಚ್ತಾನೆ. ಯಾರೂ ಈತನ ಲಾಕೆಟ್ಟನ್ನ ಹುಡುಕೋಕ್ಕೆ ಸಹಾಯ ಮಾಡಲ್ಲ.
.
.
ಈ ತರಃ, ವಿಚಿತ್ರವಾಗಿ ವರ್ತಿಸೋ ಈತನನ್ನ ಜನ, ಪೊಲೀಸು ಏನಾದ್ರೂ ಕೇಳಕ್ಕ್ ಬಂದಾಗ್ "PK ಆಯೇ ಕ್ಯಾ" ಅಂತಿರ‍್ತಾರೆ. ಅಂಗಾಗಿ, "PK ಆಯೇ ಕ್ಯಾ" ಅಂದ್ರೇನು ಅಂತಾ ಗೊತ್ತಿಲ್ಲದ ಈತನಿಗೆ PK ಅನ್ನೋದೇ ಖಾಯಂ ಹೆಸರಾಗೋಗುತ್ತೆ.
.
.
ದೂರದ ಬೆಲ್ಜಿಯಂನಲ್ಲಿ ಅಮಿತಾಬ್‍ ಬಚ್ಚನ್‍ನ ಇಬ್ರು Fanಗಳು, ಅಮಿತಾಬ್‍ದು ಶೋ ನೋಡಕ್ಕ್ ಟಿಕೇಟ್ ಸಿಗದೇ ಭೇಟಿಯಾಗ್ತಾರೆ. ಅದ್ರಲ್ಲಿ ಆಕೆ ಭಾರತೀಯ ಹಿಂದೂ ಹುಡ್ಗಿ ಜಗ್ಗು, ಆಕೆ ಜರ್ನಲಿಸಂ ವಿಧ್ಯಾರ್ಥಿ, ಮತ್ತ್ ಪಾಕಿಸ್ತಾನಿ ಸಾಬರ ಹುಡ್ಗ ಸರ್ಫರಾಜ್, ಆತ ಒಳ್ಳೇ ಹಾಡುಗಾರ ಮತ್ತು ಬೆಲ್ಜಿಯಂನಲ್ಲಿನ ಪಾಕಿಸ್ತಾನದ Embassyನಲ್ಲಿ ಪಾರ್ಟ್ ಟೈಂ ಕೆಲ್ಸ ಮಾಡ್ತಿರ‍್ತಾನೆ (ಆದ್ರೆ, ಈತ ಹೀರೋ PK ಅಂತೂ ಅಲ್ಲ). ಇವ್ರಿಬ್ಬರಿಗೂ ಹರಿವಂಶ್‍ರಾಯ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಮ್ಯಾಗಿನ ಒಂದು ಸಮಾನ ಭಾವ ಮತ್ತು ಬಾಂಧವ್ಯದಿಂದ ಪ್ರೀತಿ, ಪ್ರೇಮ, ಪ್ರಣಯ ಎಲ್ಲವೂ ಹುಟ್ಟುತ್ತೆ. ಇಬ್ರೂ ಮದ್ವೆ ಆಗೋಣ ಅಂದ್ಕಂತಾರೆ, ಆದ್ರೆ ಹುಡ್ಗಿ ಮನೆಯಾಗ್ ಒಪ್ಪಲ್ಲ ಇದಕ್ಕೆ, ಕಾರಣ, ಹುಡ್ಗ ಪಾಕಿಸ್ತಾನಿ, ನಂಬಿಕೆಗೆ ಅರ್ಹನಲ್ಲದವನು ಮತ್ತು ಆತ ಹಿಂದೂವಲ್ಲ ಅನ್ನೋದು. ಆದರೂ, ಆಕೆ ಅದೇ ಹುಡಗನ್ನ ಮದ್ವೆ ಆಗೋದು ಅಂತಾ ತೀರ್ಮಾನಿಸಿ ಆ ಇಬ್ಬರೂ ಪ್ರೇಮಿಗಳು ಅದೇ ಬೆಲ್ಜಿಯಂನಲ್ಲಿ ಮದ್ವೆ ಆಗೋ ಟೇಮ್ ಬಂದಾಗ, ಅಲ್ಲಿ ಹುಡ್ಗಿ ಜಗ್ಗುಗ್ ಒಂದ್ ಪತ್ರ ಬರುತ್ತೆ "I'm Sorry, I can't Marry U" ಅಂತಾ. ಇದರಿಂದ ಬೇಜಾರಾದ ಹುಡ್ಗಿ ಜಗ್ಗು, ಆ ಪ್ರೇಮಕ್ಕ್ ಎಳ್ಳೂ ನೀರ್ ಬಿಟ್ಟು ವಾಪಸ್ ದೆಹಲಿಗ್ ಬರ‍್ತಾಳೆ ಮತ್ತು ಅಲ್ಲಿ ಒಂದ್ TV ಚಾನಲ್‍ನಲ್ಲಿ ಕೆಲ್ಸಕ್ಕ್ ಸೇರ‍್ತಾಳೆ.
.
.
ತದನಂತರವೇ ಆಕೆಗೆ PKಯ ಪರಿಚಯವಾಗೋದು. ನಾನು ಮುಂಚೆ ಕೇಳಿದ್ದ, ನೆಟ್‍ನಲ್ಲಿ ಓದಿದ್ದ "ಡ್ಯಾನ್ಸಿಂಗ್ ಕಾರ್" ಅರ್ಥಾತ್ ಕಾರ್ ಒಳಗೇ ಖಲ್ಲಂಖುಲ್ಲಂ ಬಟ್ಟೆಬಿಚ್ಚಿ ಸೆಕ್ಸ್ ಮಾಡೋ ಜನರನ್ನ ಇಲ್ಲಿ ಪಸಂದಾಗ್ ತೋರ‍್ಸವ್ರೆ.
.
.
ಡಿಪರೆಂಟ್ ಡ್ರೆಸ್ಸಿನ, ಯಾವುದೋ ಗ್ರಹದ ಜೀವಿಗಳ ತರ ಇರೋ ಕಣ್ಣು ಮತ್ತು ಕಿವಿಯ, ಕೆಂದುಟಿಯ, ಭೋಜ್‍ಪುರಿ ಭಾಷೆ ಮಾತಾಡುವ PK ಇಲ್ಲಿ ಇಷ್ಟವಾಗ್ತಾನೆ.
.
.
ಚಿತ್ರವಿಚಿತ್ರವಾಗಿ ಆಡೋ ಈ PK, ಪತ್ರಕರ್ತೆ ಜಗ್ಗುಗೆ ಇಷ್ಟವಾಗ್ತಾನೆ. ಈತನ ಕಥೆ ಕೆಳಿದ ಜಗ್ಗು, ಆತನ ಲಾಕೆಟ್ಟನ್ನ ಮತ್ತೆ ವಾಪಸ್ ಪಡೆಯೋಕ್ಕೆ ಈತನಿಗೆ ಸಹಾಯ ಮಾಡೋಕ್ಕ್ ಶುರು ಮಾಡ್ತಾಳೆ. ಈ PKಯ ಲಾಕೆಟ್ಟನ್ನ ಅಂದು ಲಪಟಾಯಿಸಿದ ವ್ಯಕ್ತಿ, ಅದನ್ನ ಓರ್ವ ದೇವಮಾನವನಿಗೆ ಮಾರ‍್ಬಿಟ್ಟಿರ‍್ತಾನೆ. ಆ ಲಾಕೆಟ್ಟನ್ನ PK ಮತ್ತ್ ಜಗ್ಗು ಸೇರ‍್ಕಂಡ್ ಎಂಗ್ ಪಡಿತಾರೇ ಅನ್ನೋದೆ ಮುಂದಿನ ಸಿನ್ಮಾ.
.
.
ಧರ್ಮಸೂಕ್ಷ್ಮ ವಿಷಯವನ್ನ ಈ ಸಿನೆಮಾದಲಿ ನಿಭಾಯಿಸಿರೋ ರೀತಿ ಬಲು ಅನನ್ಯವಾದದ್ದು.

ಪ್ರತಿ ಧರ್ಮದಲ್ಲಿನ ನಂಬಿಕೆ, ಕಂದಾಚಾರಗಳನ್ನ ತನ್ನ ಮುಗ್ಧತೆಯಿಂದಲೇ ತಿಳಿದುಕೊಳ್ಳೋ PK, ಅಲ್ಲೆಲ್ಲಾ ಪ್ರತಿಕ್ರಿಯಿಸೋ ರೀತಿ ಅದ್ಭುತವಾಗಿದೆ. ದೇವಮಾನವರ ಹುಳುಕುಗಳು, ನಮ್ಮ ಜನರ ಅಳುಕುಗಳು ಇಂತಾ ವಿಷ್ಯಗಳ ಬಗ್ಗೆ ತನ್ನದೇ ರೀತಿಯಲ್ಲಿ ಪ್ರಶ್ನೆಗಳನ್ನ ಕೇಳುತ್ತಾ ಆ ದೇವಮಾನವರನ್ನ ಬೆತ್ತಲೆ ಮಾಡೋ ರೀತಿ ತುಂಬಾ ಚೆನ್ನಾಗಿ ಮೂಡಿಬಂದಿದೆ. "O My God" ಚಿತ್ರದ ಎಳೆ ಇಲ್ಲಿ ಚೂರ್ ಕಂಡ್ರೂ, ಇದು ತನ್ನದೇ ರೀತಿಯಲ್ಲಿ ಬೇರೆ ತರ ಇರೋ ಸಿನ್ಮಾ.
.
.
ಕೆಲವೊಂದನ್ನ ನಾವ್ Different ಆಗ್ ನೋಡುದ್ರೆ ಪ್ರಂಪಂಚ ಎಂಗಿರುತ್ತೆ ಅಂತಾ ಯೋಚ್ನೆಗಚ್ಚಿಸೋ ಸಿನ್ಮಾ ಇದು.
.
.
ಸಾಮಾನ್ಯ ಜನರು ದೇವರು, ದೇವಮಾನವರ ಬಗ್ಗೆ ಕೇಳಕ್ಕ್ ಇಷ್ಟ ಪಡೋ, ಆದ್ರೆ ಕೇಳಕ್ಕಾಗದ ಪ್ರಶ್ನೆಗಳನ್ನ ಈ PK ಕೇಳ್ತಾ ಹೋಗ್ತಾನೆ ಈ ಸಿನೆಮಾದಲ್ಲಿ.

.
.
ಅಂತೂ ಕೊನೆಗೆ ಆ ದೇವಮಾನವನೊಂದಿಗೆ TVಯಲ್ಲಿ ಮುಖಾಮುಖಿಯಾಗಿ, ದೇವಮಾನವ ಕೇಳೋ ಪ್ರಶ್ನೆಗಳಿಗೆ ತನ್ನದೇ ರೀತಿಯಲ್ಲಿ ಮುಗ್ಧವಾಗಿ ಉತ್ತರಿಸಿ, ಮೋಸ ಮಾಡಿ ಓಡಿ ಹೋಗಿದ್ದ ಅಂತಾ ನಂಬಿಕೊಂಡಿದ್ದ ಪತ್ರಕರ್ತೆ ಜಗ್ಗುವಿನ ಪಾಕಿಸ್ತಾನಿ ಪ್ರೇಮಿಯನ್ನ ಆಕೆಯೊಂದಿಗೆ ಸೇರಿಸಿ, ತನ್ನ ಮನದೊಳಗಿದ್ದ ಜಗ್ಗುವಿನ ಮೇಲೆ ಉಂಟಾಗಿದ್ದ ಪ್ರೀತಿಯನ್ನ ಹೇಳಿಕೊಳ್ಳಲಾಗದೇ, ತನ್ನ ಲಾಕೆಟ್ಟನ್ನ ಮಡೆದು, ಮರಳಿ ತನ್ನ ಗ್ರಹಕ್ಕೆ PK ಹೊಂಟೋಗ್ತಾನೆ.

.
.
ನಿಮಗೆ ಸಿನೆಮಾ ಇಷ್ಟವಾಗುತ್ತೆ, ಆಪ್ತ ಅನ್ಸುತ್ತೆ, ಒಂದ್ಸಲ ನೋಡಬಹುದಾದ ಸಿನ್ಮಾ ಇದು. ನಾನಂತೂ ಮತ್ತೊಂದ್ಸಲ ಹೋಗೋ ತಯಾರಿಯಲ್ಲಿದ್ದೇನೆ.
.
.
(ಜನ ತಮ್ಮ್ ಪರ್ಸ್ ಕಳಕೊಂಡ್ರೆ, ಅದ್ಯಾರಿಗಾದ್ರೂ ಸಿಕ್ಕಿ ಇದು ನಿಮ್ದಾ ಅಂದಾಗ “ಎಲ್ರೂ ಆಂ ನಮ್ದೇ ನಮ್ದೇ ನಮ್ದೇ” ಅಂತಾ ಓಡಿ ಬರ್ತಾರೆ. ಆದ್ರೆ ಅದೇ ಜನರಲ್ಲಿ ಯಾರಾದ್ರೂ ಒಬ್ರ ಪ್ಯಾಕೆಟ್ಟಿಂದ ಕಾಂಡೋಂ ಬೀಳಿಸಿಕೊಂಡು, ಅದ್ಯಾರಿಗಾದ್ರೂ ಸಿಕ್ಕಿ, ಇದು ನಿಮ್ದಾ ಅಂದ್ರೆ ಮಾತ್ರ “ಯಾರೂ ಒಪ್ಕಳಲ್ಲ”. ಯಾಕೇ?)
ಹೆಹೆಹೆಹೆಹೆಹೆಹೆಹೆಹೆಹೆಹೆಹೆ


No comments: